Publish Date: Sat, 10 Jul 2021 (10:15 IST)
Updated Date: Sat, 10 Jul 2021 (10:17 IST)
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇತ್ತೀಚೆಗೆ ಸಾರ್ವಜನಿಕ ಜೀವನದಿಂದಲೇ ದೂರವಿದ್ದಾರೆ. ಆದರೆ ಇದೀಗ ದಿಡೀರ್ ಆಗಿ ಲೈವ್ ಬಂದು ಎಲ್ಲರಿಗೂ ಅಚ್ಚರಿ ಕೊಟ್ಟಿದ್ದಾರೆ.
ರಮ್ಯಾ ಇನ್ ಸ್ಟಾಗ್ರಾಂ ಪುಟದಲ್ಲಿ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆಗೆ ಲೈವ್ ಬಂದಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲೈವ್ ವೇಳೆ ಬಂದ ಪ್ರಶ್ನೆಗೆ ಸಿನಿಮಾ ಬಿಟ್ಟ ಮೇಲೆ ವರ್ಕೌಟ್ ಮಾಡ್ತಿಲ್ಲ, ಆದರೆ ಕಂಪ್ಲೀಟ್ ವೆಜಿಟೇರಿಯನ್ ಆಗಿದ್ದೇನೆ ಎಂದಿದ್ದಾರೆ ರಮ್ಯಾ.
ಇನ್ನು, ವ್ಯಾಕ್ಸಿನ್ ವಿಚಾರಕ್ಕೆ ಬಂದರೆ ತಾನು ಅಮೆರಿಕನ್ ವ್ಯಾಕ್ಸಿನ್ ಗೆ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ವ್ಯಾಕ್ಸಿನ್ ವಿಚಾರದಲ್ಲಿ ಹಲವು ಗೊಂದಲ ಕ್ರಿಯೇಟ್ ಆಗಿದೆ. ನಾನಿನ್ನೂ ವ್ಯಾಕ್ಸಿನ್ ತಗೊಂಡಿಲ್ಲ. ನಾನು ಮೊಡೆರ್ನಾ ವ್ಯಾಕ್ಸಿನ್ ಗೆ ಕಾಯುತ್ತಿದ್ದೇನೆ ಎಂದಿದ್ದಾರೆ. ಅವರ ಈ ಹೇಳಿಕೆ ಟ್ರೋಲ್ ಆಗೋದು ಖಂಡಿತಾ. ಅದೇನೇ ಇದ್ದರೂ ಅಪರೂಪಕ್ಕೆ ರಮ್ಯಾ ಲೈವ್ ಬಂದಿದ್ದು, ಅಭಿಮಾನಿಗಳಿಗಂತೂ ಖುಷಿಕೊಟ್ಟಿದೆ.