Publish Date: Fri, 09 Jul 2021 (10:37 IST)
Updated Date: Fri, 09 Jul 2021 (10:38 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟರಾದ ನೀನಾಸಂ ಸತೀಶ್, ಡಾಲಿ ಧನಂಜಯ್, ನೆನಪಿರಲಿ ಪ್ರೇಮ್ ಸೇರಿದಂತೆ ಸೇರಿದಂತೆ ಸ್ಯಾಂಡಲ್ ವುಡ್ ಕಲಾವಿದರು ನಿನ್ನೆ ನಿಧನರಾದ ನಟ ದುನಿಯಾ ವಿಜಯ್ ತಾಯಿ ಅಂತಿಮ ದರ್ಶನ ಪಡೆದಿದ್ದಾರೆ.
ದುನಿಯಾ ವಿಜಯ್ ನಿವಾಸದಲ್ಲಿ ನಾರಾಯಣಮ್ಮ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬ್ರೈನ್ ಸ್ಟ್ರೋಕ್ ನಿಂದಾಗಿ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದ ನಾರಾಯಣಮ್ಮ ನಿನ್ನೆ ಇಹಲೋಕ ತ್ಯಜಿಸಿದ್ದರು.
ಇಂದು ಅವರ ಅಂತ್ಯಕ್ರಿಯೆ ಆನೆಕಲ್ ಬಳಿಯ ಕುಂಬಾರಹಳ್ಳಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ತಾಯಿಯ ಮೃತದೇಹದ ಮುಂದೆ ಭಾವುಕರಾಗಿ ನಿಂತಿದ್ದ ವಿಜಯ್ ಗೆ ಅವರ ಸ್ನೇಹಿತರು ಸಾಂತ್ವನ ಹೇಳಿದ್ದಾರೆ.