Publish Date: Thu, 08 Jul 2021 (13:09 IST)
Updated Date: Thu, 08 Jul 2021 (11:10 IST)
ಬೆಂಗಳೂರು: ನಟ ಅರ್ಜುನ್ ಸರ್ಜಾ ಚೆನ್ನೈನಲ್ಲಿ ತಮ್ಮ ಕುಟುಂಬದ ವತಿಯಿಂದ ಕಟ್ಟಿಸಿದ ಆಂಜನೇಯನ ದೇವಾಲಯದ ಕುಂಭಾಭಿಷೇಕ ಇತ್ತೀಚೆಗೆ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬಸ್ಥರೆಲ್ಲರೂ ಭಾಗಿಯಾಗಿದ್ದರು.
ಆದರೆ ಜ್ಯೂನಿಯರ್ ಚಿರು ಸರ್ಜಾ ಮತ್ತು ಮೇಘನಾ ಸರ್ಜಾ ಮಾತ್ರ ಭಾಗಿಯಾಗಿರಲಿಲ್ಲ. ಕೊರೋನಾ ಕಾರಣದಿಂದ ಎಳೆಯ ಮಗುವನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲಾಗಿರಲಿಲ್ಲ.
ಆದರೆ ಅರ್ಜುನ್ ಸರ್ಜಾಗೆ ತಮ್ಮ ಮೊಮ್ಮಗನಿಗೆ ಹೇಗಾದರೂ ದೇವಾಲಯ ತೋರಿಸಲೇಬೇಕೆಂದು ಅನಿಸಿತ್ತು. ಇದಕ್ಕಾಗಿ ವಿಡಿಯೋ ಕಾಲ್ ಮುಖಾಂತರವೇ ಆಂಜನೇಯನ ದರ್ಶನ ಮಾಡಿಸಿ ಖುಷಿಪಟ್ಟಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.