Publish Date: Fri, 09 Jul 2021 (10:41 IST)
Updated Date: Fri, 09 Jul 2021 (10:29 IST)
ಬೆಂಗಳೂರು: ನಂದಕಿಶೋರ್ ನಿರ್ದೇಶನದಲ್ಲಿ ಶ್ರೇಯಸ್ ಮಂಜು ನಾಯಕರಾಗಿರುವ ರಾಣ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಿನ್ನೆ ನೆರವೇರಿದೆ.
ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ ರಿಯಲ್ ಸ್ಟಾರ್ ಉಪೇಂದ್ರ ದಂಪತಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಗುಜ್ವಲ್ ಪುರುಷೋತ್ತಮ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿದ್ದು, ಶ್ರೇಯಸ್ ಮಂಜು ಅವರ ಎರಡನೇ ಸಿನಿಮಾವಾಗಿದೆ.
ಮುಂದಿನ ವಾರದಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ರೀಷ್ಮಾ ನಾಣಯ್ಯ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಆದಷ್ಟು ಹೊಸಬರಿಗೆ ಅವಕಾಶ ನೀಡಲಾಗಿದೆಯಂತೆ. ಇದೊಂದು ಆಕ್ಷನ್ ಎಂಟರ್ ಟೈನರ್ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.