ಆಕಾಶ್ ಶ್ರೀವತ್ಸ ನಿರ್ದೇಶನದ ಪತ್ತೇದಾರಿ ಸಿನಿಮಾ ‘ಶಿವಾಜಿ ಸುರತ್ಕಲ್’ ಬಿಡುಗಡೆಗೆ ಸಿದ್ದ

Webdunia
ಮಂಗಳವಾರ, 11 ಫೆಬ್ರವರಿ 2020 (13:33 IST)
ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್’ ಚಿತ್ರ ಇದೇ ಫೆಬ್ರವರಿ 21ಕ್ಕೆ ತೆರೆಗೆ ಬರಲು ರೆಡಿಯಾಗಿದೆ. ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರದಲ್ಲಿ ಎರಡು ವಿಭಿನ್ನ ಶೇಡ್ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ.  ಈ ಚಿತ್ರದ  ಕುತೂಹಲಕಾರಿ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಸಖತ್ ಥ್ರಿಲ್ ಕೊಡುತ್ತಿದೆ.  ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಮೊದಲ ಬಾರಿ ತನಿಖಾಧಿಕಾರಿಯಾಗಿ ರಮೇಶ್ ಅರವಿಂದ್ ಬಣ್ಣಹಚ್ಚಿರೋದು ಚಿತ್ರದ ವಿಶೇಷ
‘ಶಿವಾಜಿ ಸುರತ್ಕಲ್’ ಪತ್ತೇದಾರಿ ಕಥಾನಕ ಸಬ್ಜೆಕ್ಟ್ ಇರೋ ಸಿನಿಮಾ. ರಣಗಿರಿಯಲ್ಲಿ  ಅನುಮಾನಾಸ್ಪದವಾಗಿ ನಡಿಯೋ ಕೊಲೆ ರಹಸ್ಯವನ್ನು ಭೇದಿಸುವ  ಪಾತ್ರದಲ್ಲಿ ರಮೇಶ್ ಮಿಂಚಿದ್ದಾರೆ. ಸಸ್ಪೆನ್ಸ್ ,ಥ್ರಿಲ್ಲಿಂಗ್ ಮತ್ತು ಹಾರಾರ್ ಸಬ್ಜೆಕ್ಟ್ ಚಿತ್ರದಲ್ಲಿದೆ. ಚಿತ್ರದಲ್ಲಿ ನಾಯಕಿಯರಾಗಿ ರಾಧಿಕಾ ನಾರಾಯಣ್, ಆರೋಹಿ ಅಭಿನಯಿಸಿದ್ದಾರೆ.

ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್, ರಾಘು ರಮಣಕೊಪ್ಪ ಸೇರಿದಂತೆ ಹಲವು ಕಲಾವಿದರ ದಂಡು ಚಿತ್ರದಲ್ಲಿದೆ ಜ್ಯೂಡಾ ಸ್ಯಾಂಡಿ ಸಂಗೀತ, ಗುರುಪ್ರಸಾಧ್ ಎಂ.ಜಿ ಕ್ಯಾಮೆರಾ ವರ್ಕ್ ‘ಶಿವಾಜಿ ಸುರತ್ಕಲ್’ಚಿತ್ರಕ್ಕಿದೆ.
ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ನಡಿ ರೇಖಾ.ಕೆ.ಎನ್, ಅನೂಪ್ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಮೈಸೂರರು, ಮಡೀಕೇರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಫೆಬ್ರವರಿ 21ಕ್ಕೆ ಥಿಯೇಟರ್ ಅಂಗಳಕ್ಕೆ ಬರಲಿರೋ ಈ ಚಿತ್ರಕ್ಕೆ ಪ್ರೇಕ್ಷಕ ಫ್ರಭುಗಳು ಜೈಕಾರ ಹಾಕ್ತಾರಾ ಕಾದು ನೋಡಬೇಕು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಮೇಲಿನ ನನ್ನ ಗೌರವ ದ್ವಿಗುಣಗೊಂಡಿದೆ: ರಿಷಬ್ ಬಗ್ಗೆ ಖುಷ್ಬೂ ಸುಂದರ್ ಗುಣಗಾನ

ಕ್ಲೈಮ್ಯಾಕ್ಸ್‌ ಹಂತಕ್ಕೆ ನಟಿ ರನ್ಯಾ ವಿರುದ್ಧದ ಪ್ರಕರಣ: ಶೀಘ್ರದಲ್ಲೇ ಚಾರ್ಚ್‌ಶೀಟ್‌ ಸಲ್ಲಿಕೆ

ಪರಶುರಾಮನ ಪಾತ್ರಕ್ಕೆ ಮದ್ಯ, ನಾನ್ ವೆಜ್ ಬಿಟ್ಟ ವಿಕ್ಕಿ ಕೌಶಾಲ್: ಪತ್ನಿ ಜೊತೆ ಅದನ್ನೂ ಮಾಡ್ಬೇಡಿ ಎಂದ ನೆಟ್ಟಿಗರು

ಮೊದಲ ಮಗುವಿಗೆ ಜನ್ಮವಿತ್ತ ಕತ್ರಿನಾ ಕೈಫ್: ವಿಕ್ಕಿ ಕೌಶಾಲ್ ಮನೆಯಲ್ಲಿ ಸಂಭ್ರಮ

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಡೇಟ್ ಫಿಕ್ಸ್

ಮುಂದಿನ ಸುದ್ದಿ
Show comments