Webdunia - Bharat's app for daily news and videos

Install App

ಸರಿಗಮಪ ಕಾರ್ಯಕ್ರಮದ ಅಂಧ ಗಾಯಕಿಯರಿಗೆ ಸೂರು ಕಟ್ಟಿಕೊಡಲಿರುವ ನಟ ಜಗ್ಗೇಶ್

Webdunia
ಮಂಗಳವಾರ, 11 ಫೆಬ್ರವರಿ 2020 (11:36 IST)
ಬೆಂಗಳೂರು: ಜೀ ಕನ್ನಡ ವಾಹಿನಿಯ ಸರಿಗಮಪ ಹಾಡಿನ ಶೋಗೆ ಬಂದಿದ್ದ ತುಮಕೂರಿನ ಇಬ್ಬರು ಅಂಧ ಅವಳಿ ಸಹೋದರಿಯರ ಸ್ಥಿತಿ ಕಂಡು ಎಲ್ಲರೂ ಮರುಗಿದ್ದರು.


ಈ ಕಾರ್ಯಕ್ರಮದಲ್ಲಿ ತಮ್ಮ ಬಡತನದ ಬಗ್ಗೆ ಹೇಳಿಕೊಂಡಿದ್ದ ಸಹೋದರಿಯರನ್ನು ನೋಡಿ ಎಲ್ಲರೂ ಕಣ್ಣೀರು ಮಿಡಿದಿದ್ದರು. ವೇದಿಕೆಯಲ್ಲೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಇನ್ನು ಮುಂದೆ ನಿಮಗೆ ತಿಂಗಳ ದಿನಸಿ ವ್ಯವಸ್ಥೆ ನನ್ನ ಕಡೆಯಿಂದ ಆಗುತ್ತದೆ ಎಂದು ಭರವಸೆ ಕೊಟ್ಟಿದ್ದರು.

ಇದೀಗ ಈ ಅವಳಿ ಸಹೋದರಿಯರಿಗೆ ಮನೆ ಕಟ್ಟಿಸಿಕೊಡಲು ನವರಸನಾಯಕ ಜಗ್ಗೇಶ್ ಮುಂದೆ ಬಂದಿದ್ದಾರೆ.  ಈ ಸಹೋದರಿಯರ ಸ್ಥಿತಿ ಕಂಡು ಭಾವುಕನಾದೆ. ತಡಮಾಡದೇ ಇವರಿಗೆ ಸೂರು ಕಲ್ಪಿಸಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್ ಗೆ ಜವಾಬ್ಧಾರಿ ನೀಡಿರುವೆ ಎಂದು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜಗ್ಗೇಶ್ ರ ಈ ಮಾನವೀಯ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

46ವರ್ಷಗಳ ಬಳಿಕ ಸ್ಕ್ರಿನ್ ಹಂಚಿಕೊಳ್ಳಲಿದ್ದಾರೆ ದಕ್ಷಿಣ ಭಾರತದ ಸ್ಟಾರ್ ನಟರು

ದರ್ಶನ್ ಭೇಟಿಯಾದ ಬೆನ್ನಲ್ಲೇ ಡೆವಿಲ್‌ ಸಿನಿಮಾದ ಬಿಗ್‌ಅಪ್ಡೇಟ್‌ ಕೊಟ್ಟ ವಿಜಯಲಕ್ಷ್ಮಿ

ವ್ಯಕ್ತಿಯೊಬ್ಬರಿಗೆ ರಶ್ಮಿಕಾ ಶೇಕ್‌ಹ್ಯಾಂಡ್ ಕೊಟ್ರೆ ವಿಜಯ್ ದೇವರಕೊಂಡ ಹೀಗೇ ನಡೆದುಕೊಳ್ಳುವುದಾ, Viral Video

ವಿಷ್ಣು ಸ್ಮಾರಕಕ್ಕೆ ಕಿಚ್ಚ ಜಾಗ ಕೊಟ್ರೇ, ಅಭಿಮಾನಿಗಳ ಸಂಘಟನೆ ಹೈಕೋರ್ಟ್ ಗೆ ಹೋಗೋದಾ

ರಮ್ಯಾಗೆ ಅಶ್ಲೀಲ ಮೆಸೇಜ್‌, ಜೀವಬೆದರಿಕೆ ಪ್ರಕರಣ: ತನಿಖೆಯಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments