Publish Date: Tue, 11 Feb 2020 (09:25 IST)
Updated Date: Tue, 11 Feb 2020 (09:27 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ನಾಯಿ ಬೇಕಾಗಿದೆ ಎಂದು ಜಾಹೀರಾತು ಕೊಟ್ಟಿದ್ದಾರೆ. ಅಷ್ಟಕ್ಕೂ ರಕ್ಷಿತ್ ಯಾಕೆ ಇಂತಹದ್ದೊಂದು ಜಾಹೀರಾತು ಕೊಟ್ಟರು ಗೊತ್ತಾ? ಎಲ್ಲವೂ ಸಿನಿಮಾಗಾಗಿ.
ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ ರಕ್ಷಿತ್ ಅಭಿನಯಿಸುತ್ತಿರುವ ಹೊಸ ಸಿನಿಮಾ ‘777 ಚಾರ್ಲಿ’. ಈ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಈ ಸಿನಿಮಾಗಾಗಿ ರಕ್ಷಿತ್ ನಾಯಿಯ ಹುಡುಕಾಟದಲ್ಲಿದ್ದಾರೆ.
ಈ ಸಿನಿಮಾದಲ್ಲಿ ಶೂಟಿಂಗ್ ಗೆ ಬಳಸಲು ಬುಲ್ ಡಾಗ್, ಆಫ್ಘನ್ ಹೌಂಡ್ ಮುಂತಾದ ಯಾವುದೇ ಉತ್ತಮ ತಳಿಯ ತರಬೇತಿ ಪಡೆದ ನಾಯಿಯಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ರಕ್ಷಿತ್ ಜಾಹೀರಾತು ನೀಡಿದ್ದಾರೆ.