Publish Date: Mon, 10 Feb 2020 (10:23 IST)
Updated Date: Mon, 10 Feb 2020 (10:26 IST)
ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಒಉತ್ರ, ನಟ ನಿಖಿಲ್ ಕುಮಾರಸ್ವಾಮಿ ಮತ್ತು ಉದ್ಯಮಿ ಮಂಜುನಾಥ್ ಪುತ್ರಿ ರೇವತಿ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆಯುತ್ತಿದೆ.
ಸಂಪ್ರದಾಯದ ಪ್ರಕಾರ ಕಾರ್ಯಕ್ರಮಕಗಳು ನೆರವೇರುತ್ತಿದ್ದು, ಎಚ್ ಡಿ ದೇವೇಗೌಡ ಮತ್ತು ಇಡೀ ಕುಟುಂಬವೇ ಹಾಜರಿದ್ದಾರೆ.
ಚಿನ್ನದ ಬಣ್ಣದ ಶೆರ್ವಾನಿ ತೊಟ್ಟು ನಿಖಿಲ್ ಮಿಂಚುತ್ತಿದ್ದರೆ ವಧು ರೇವತಿ ಕೂಡಾ ರೇಶ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಇನ್ನು, ಸಂಪ್ರದಾಯದ ಪ್ರಕಾರ ನಿಶ್ಚಿತಾರ್ಥ ಕಾರ್ಯಕ್ರಮಗಳು ನಡೆಯುತ್ತಿದ್ದು, ಸ್ವತಃ ಅನಿತಾ ಕುಮಾರಸ್ವಾಮಿ ಮುಂಚೂಣಿಯಲ್ಲಿ ನಿಂತು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.