Select Your Language

Notifications

webdunia
webdunia
webdunia
webdunia

ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ಟ್ರೈಲರ್ ರಿಲೀಸ್..!! ಫೆಬ್ರವರಿ 21ಕ್ಕೆ ಚಿತ್ರ ಬಿಡುಗಡೆಗೆ ರೆಡಿ...!

ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ಟ್ರೈಲರ್ ರಿಲೀಸ್..!!  ಫೆಬ್ರವರಿ 21ಕ್ಕೆ ಚಿತ್ರ ಬಿಡುಗಡೆಗೆ ರೆಡಿ...!
ಬೆಂಗಳೂರು , ಶುಕ್ರವಾರ, 7 ಫೆಬ್ರವರಿ 2020 (14:22 IST)
ರಮೇಶ್ ಅರವಿಂದ್ ನಟಿಸಿರುವ ಪತ್ತೇದಾರಿ ಕಥಾಹಂದರವುಳ್ಳ  ‘ಶಿವಾಜಿ ಸುರತ್ಕಲ್’ ಚಿತ್ರದ ಇಂಟ್ರಸ್ಟಿಂಗ್ ಟ್ರೈಲರ್ ಬಿಡುಗಡೆಯಾಗಿದೆ. ಡಿಟೆಕ್ಟಿವ್ ಪಾತ್ರದಲ್ಲಿ ರಮೇಶ್ ಅರವಿಂದ್ ಮಿಂಚಿದ್ದು,  ಫೆಬ್ರವರಿ 21ಕ್ಕೆ ಚಿತ್ರ ತೆರೆಗೆ ಬರಲು ರೆಡಿಯಾಗಿದೆ.
ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಡಿಟೆಕ್ಟಿವ್ ಪಾತ್ರದಲ್ಲಿ, ಎರಡು ವಿಭಿನ್ನ ಶೇಡ್ನಲ್ಲಿ ಕೂಡ ರಂಜಿಸಲಿದ್ದಾರೆ. 
ಟೀಸರ್ ಹಾಗೂ ಟ್ರೈಲರ್ ಬಾರೀ ನೀರೀಕ್ಷೆ ಹಾಗೂ ಕುತೂಹಲವನ್ನು ಚಿತ್ರದ ಮೇಲೆ ಹುಟ್ಟುಹಾಕಿದೆ.  ರಣಗಿರಿಯಲ್ಲಿ ನಡೆಯೋ ಅನುಮಾನಾಸ್ಪದ ಸಾವಿನ ಸುತ್ತ ಈ ಕತೆಯನ್ನು ಹೆಣೆಯಲಾಗಿದ್ದು, ಇದನ್ನು ಭೇಧಿಸುವ ಡಿಟೆಕ್ಟಿವ್ ಆಗಿ ರಮೇಶ್ ಅರವಿಂದ್ ಇಲ್ಲಿ ಬಣ್ಣಹಚ್ಚಿದ್ದಾರೆ. ಸಸ್ಪೆನ್ಸ್, ಹಾರಾರ್, ಥ್ರಿಲ್ಲಿಂಗ್  ಎಲಿಮೆಂಟ್ಗಳು ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಮಿಶ್ರಣವಾಗಿದ್ದು ನೋಡುಗರಿಗೆ ಥ್ರಿಲ್ ಕೊಡಲಿದೆ. ಟ್ರೇಲರ್ ಕೂಡ ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
webdunia
ರಾಧಿಕಾ ನಾರಾಯಣ್, ಆರೋಹಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್, ರಾಘು ರಮಣಕೊಪ್ಪ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
webdunia

ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗುರುಪ್ರಸಾಧ್ ಎಂ.ಜಿ ಕ್ಯಾಮೆರಾ ವರ್ಕ್ ‘ಶಿವಾಜಿ ಸುರತ್ಕಲ್’ ಚಿತ್ರಕ್ಕಿದೆ.

ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ನಡಿ ಚಿತ್ರ ನಿರ್ಮಾಣವಾಗಿದ್ದು, ರೇಖಾ.ಕೆ.ಎನ್, ಅನೂಪ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟಿಹಾಕಿರುವ ಈ ಚಿತ್ರ ಫೆಬ್ರವರಿ 21ಕ್ಕೆ  ತೆರೆಗೆ ಬರಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೊಲೆ ರಹಸ್ಯ ಬೇಧಿಸಲು ಹೊರಟ ರಮೇಶ್ ಅರವಿಂದ್