Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ಅಭಿನಯಿಸಲು ನಿಮಗೂ ಅವಕಾಶ!

ಶಿವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ಅಭಿನಯಿಸಲು ನಿಮಗೂ ಅವಕಾಶ!
ಬೆಂಗಳೂರು , ಶುಕ್ರವಾರ, 7 ಫೆಬ್ರವರಿ 2020 (09:32 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾದಲ್ಲಿ ಅಭಿನಯಿಸಲು ಹಿರಿ-ಕಿರಿಯ ಕಲಾವಿದರೆ ಆಹ್ವಾನ ನೀಡಲಾಗಿದೆ.


ಶಿವರಾಜ್ ಕುಮಾರ್ ತಮಿಳಿನ ರವಿ ಅರಸು ನಿರ್ದೇಶನದಲ್ಲಿ ಹೊಸ ಸಿನಿಮಾವೊಂದನ್ನು ಮಾಡುತ್ತಿರುವ ಸುದ್ದಿ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಈ ಸಿನಿಮಾಗೆ ಕಲಾವಿದರ ಆವಶ್ಯಕತೆಯಿದ್ದು, ಆಡಿಷನ್ ಗಾಗಿ ಚಿತ್ರತಂಡ ಕರೆ ನೀಡಿದೆ.

5 ವರ್ಷ ಮಕ್ಕಳಿಂದ 60 ವರ್ಷ ವಯಸ್ಸಿನ ಪುರುಷ-ಮಹಿಳೆಯರಿಗೂ ಆಡಿಷನ್ ನಲ್ಲಿ ಭಾಗವಹಿಸಲು ಅವಕಾಶವಿದೆ. ನಾಳೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿರುವ ಆಡಿಷನ್ ನಲ್ಲಿ ಭಾಗವಹಿಸಬಹುದು ಎಂದು ಚಿತ್ರತಂಡ ಪ್ರಕಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬಿಡುಗಡೆಯಾಗಲಿದೆ ಈ ನಾಲ್ಕು ಕುತೂಹಲಕಾರಿ ಸಿನಿಮಾ