Publish Date: Thu, 06 Feb 2020 (11:44 IST)
Updated Date: Thu, 06 Feb 2020 (11:47 IST)
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಕೆಲವು ದಿನ ಬ್ರೇಕ್ ತಗೊಂಡಿದ್ದಾರಾ ಎಂಬ ಪ್ರಶ್ನೆಗೆ ಅವರಿಂದಲೇ ಉತ್ತರ ಸಿಕ್ಕಿದೆ.
ಅವನೇ.. ಸಿನಿಮಾ ಯಶಸ್ಸಿನ ಬಳಿಕ ಸುಮ್ಮನೇ ಕೂರದ ರಕ್ಷಿತ್ ತಮ್ಮ ಹೊಸ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ರಕ್ಷಿತ್ ಕೈಗೆತ್ತಿಕೊಂಡಿರುವ ಮತ್ತೊಂದು ಡ್ರೀಮ್ ಪ್ರಾಜೆಕ್ಟ್ ‘777 ಚಾರ್ಲಿ’.
ಈ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಗೋವಾದಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ರಕ್ಷಿತ್ ಈ ಸಿನಿಮಾದ ಶೂಟಿಂಗ್ ಸೆಟ್ ನ ಅದ್ಭುತ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.