Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಗೆ ಇಂದು ಸ್ಪೆಷಲ್ ಡೇ

ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಗೆ ಇಂದು ಸ್ಪೆಷಲ್ ಡೇ
ಬೆಂಗಳೂರು , ಮಂಗಳವಾರ, 11 ಫೆಬ್ರವರಿ 2020 (10:16 IST)
ಬೆಂಗಳೂರು: ನಟ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪತ್ನಿ ಶಿಲ್ಪಾ ಗಣೇಶ್ ಪಾಲಿಗೆ ಇಂದು ವಿಶೇಷ ದಿನ. ಯಾಕೆಂದರೆ ಈ ಮುದ್ದು ಜೋಡಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ.

 
ಮುಂಗಾರುಮಳೆ ಬಿಡುಗಡೆಯಾಗಿ ಆಗಷ್ಟೇ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಪಟ್ಟ ಮುಡಿಗೇರಿಸಿಕೊಂಡಿದ್ದ ಗಣೇಶ್ ದಿಡೀರ್ ಆಗಿ ಮದುವೆ ಸುದ್ದಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಅಂತೂ ಗಣೇಶ್ ಮದುವೆಯಾಗಿ ಇಂದಿಗೆ 12 ವರ್ಷ ಕಳೆದಿದ್ದು, ಈ ದಂಪತಿಗೆ ಈಗ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪತ್ನಿ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಬರೆದುಕೊಂಡಿರುವ ಗಣೇಶ್ ನೀನು ನನ್ನ ರಾಣಿ, ನನ್ನ ಆತ್ಮಸಂಗಾತಿ ಎಂದು ಪ್ರೀತಿ ಹಂಚಿಕೊಂಡಿದ್ದಾರೆ. ಗಣೇಶ್ ದಂಪತಿಗೆ ಅಭಿಮಾನಿಗಳಿಂದಲೂ ಶುಭಾಷಯಗಳ ಸುರಿಮಳೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಚಿತ್ರತಂಡಕ್ಕೆ ಮತ್ತೊಬ್ಬ ಖ್ಯಾತ ನಟನ ಸೇರ್ಪಡೆ