Select Your Language

Notifications

webdunia
webdunia
webdunia
webdunia

ಒಂದು ತಿಂಗಳ ಮಗಳಿಗೆ ವಿಶೇಷ ಕೋಣೆ ಸಿದ್ಧಪಡಿಸಿರುವ ರಾಮ್ ಚರಣ್-ಉಪಾಸನಾ

Ramcharan, upasana with baby
ಹೈದರಾಬಾದ್ , ಶುಕ್ರವಾರ, 14 ಜುಲೈ 2023 (20:28 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ರಾಮ್ ಚರಣ್-ಉಪಾಸನಾ ದಂಪತಿ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಪೋಷಕರಾಗಿದ್ದರು.

ದಂಪತಿ ತಮ್ಮ ಮಗಳಿಗೆ ಕ್ಲಿನ್ ಕಾರಾ ಎಂಬ ಅಪರೂಪದ ಹೆಸರಿಟ್ಟಿದ್ದರು. ಇದೀಗ ರಾಮ್ ಚರಣ್ ದಂಪತಿ ತಮ್ಮ ಒಂದು ತಿಂಗಳ ಮಗಳಿಗಾಗಿ ವಿಶೇಷ ಕೋಣೆ ಸಿದ್ಧಪಡಿಸಿದ್ದು, ಆ ವಿಡಿಯೋಗಳು  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಗಳಿಗೆಂದೇ ಫಾರೆಸ್ಟ್ ಥೀಮ್ ನ ಕೋಣೆಯೊಂದನ್ನು ಸಿದ್ಧಪಡಿಸಿದ್ದಾರೆ. ಬಿಳಿ ಮತ್ತು ತಿಳಿ ಪಿಂಕ್ ಬಣ್ಣದ ಕೋಣೆಯೊಳಗೆ ಆನೆ, ಕರಡಿ, ಮರಗಳು ಸೇರಿದಂತೆ ಅರಣ್ಯಕ್ಕೆ ಸಂಬಂಧಿಸಿದ ಚಿತ್ರಗಳನ್ನು, ಆಟಿಕೆಗಳನ್ನು ಇರಿಸಲಾಗಿದೆ. ಆರ್ಕ್ ಡೈಜೆಸ್ಟ್ ಇಂಡಿಯಾ ಎಂಬ ಸಂಸ್ಥೆ ರಾಮ್ ಚರಣ್ ಮಗಳಿಗೆ ಈ ವಿಶೇಷ ಕೋಣೆ ಸಿದ್ಧಪಡಿಸಿಕೊಟ್ಟಿದೆ. ಮಗುವಿನ ಬೆಳವಣಿಗೆಗೆ, ಮನೋವಿಕಾಸಕ್ಕೆ ಪೂರಕವಾದ ಅಂಶವನ್ನು ಒಳಗೊಂಡಂತೆ ಡಿಸೈನ್ ಮಾಡಲಾಗಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡ ತಮ್ಮನ ಸಿನಿಮಾ ನೋಡಿ ಭಾವುಕರಾದ ರಶ್ಮಿಕಾ ಮಂದಣ್ಣ