Select Your Language

Notifications

webdunia
webdunia
webdunia
webdunia

ನಿತಿನ್ ಸಿನಿಮಾದಿಂದ ಹೊರನಡೆದಿದ್ದೇಕೆ ರಶ್ಮಿಕಾ ಮಂದಣ್ಣ?

ನಿತಿನ್ ಸಿನಿಮಾದಿಂದ ಹೊರನಡೆದಿದ್ದೇಕೆ ರಶ್ಮಿಕಾ ಮಂದಣ್ಣ?
ಹೈದರಾಬಾದ್ , ಶುಕ್ರವಾರ, 14 ಜುಲೈ 2023 (09:00 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ತೆಲುಗಿನ ನಿತಿನ್ ನಾಯಕರಾಗಿರುವ ಸಿನಿಮಾದಿಂದ ಹೊರನಡೆದಿದ್ದಾರೆ. ಇದಕ್ಕೆ ಕಾರಣ ಈಗ ಬಯಲಾಗಿದೆ.

ನಿತಿನ್ ನಾಯಕರಾಗಿ ವೆಂಕಿ ಕಡಮುಲ ನಿರ್ದೇಶಕರಾಗಿರುವ ಭೀಷ್ಮ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗಿತ್ತು. ಇದೀಗ ಅದೇ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಆ ಸಿನಿಮಾದ ಮುಹೂರ್ತದಲ್ಲೂ ರಶ್ಮಿಕಾ ಭಾಗಿಯಾಗಿದ್ದರು.

ಆದರೆ ಸಡನ್ ಆಗಿ ರಶ್ಮಿಕಾ ಸಿನಿಮಾದಿಂದ ಹೊರನಡೆದಿದ್ದು ಆ ಜಾಗಕ್ಕೆ ಶ್ರೀಲೀಲಾ ಬಂದಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಸಿನಿಮಾದಿಂದ ಹೊರನಡೆಯಲು ಕಾರಣ ಡೇಟ್ಸ್ ಸಮಸ್ಯೆ ಎನ್ನಲಾಗಿದೆ. ರಶ್ಮಿಕಾ ಈಗಾಗಲೇ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈ ನಡುವೆ ನಿತಿನ್ ಸಿನಿಮಾಗೆ ಡೇಟ್ಸ್ ಹೊಂದಾಣಿಕೆಯಿಂದಾಗಿ ರಶ್ಮಿಕಾ ಹೊರಬಂದಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಗಾಸ್ಟಾರ್ ಚಿರಂಜೀವಿ ಕನಸು ನನಸು ಮಾಡ್ತಾರಾ ಪ್ರಶಾಂತ್ ನೀಲ್?!