Publish Date: Sat, 31 Aug 2024 (10:57 IST)
Updated Date: Sat, 31 Aug 2024 (11:04 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಚಾರಿ ಧಾರವಾಹಿ ಈಗ ರೋಚಕ ಹಂತದಲ್ಲಿದೆ. ಬಹುದಿನಗಳಿಂದ ಅಭಿಮಾನಿಗಳು ಕಾಯುತ್ತಿದ್ದ ಆ ಗಳಿಗೆ ಬಂದೇ ಬಿಟ್ಟಿದೆ.
ಕಲರ್ಸ್ ಕನ್ನಡದ ಜನಪ್ರಿಯ ಜೋಡಿ ಚಾರು ಮತ್ತು ಚಾರಿ. ನಾಯಕ ರಾಮಚಾರಿ ಪಾತ್ರದಲ್ಲಿ ರಿತ್ವಿಕ್ ಮತ್ತು ನಾಯಕಿ ಚಾರುಲತಾ ಆಗಿ ಮೌನ ಗುಡ್ಡೆ ಮನೆ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. ಕಳೆದ ಬಾರಿ ಕಲರ್ಸ್ ಅನುಬಂಧ ಕಾರ್ಯಕ್ರಮದಲ್ಲಿ ಇಬ್ಬರೂ ಜನಪ್ರಿಯ ಜೋಡಿ ಪ್ರಶಸ್ತಿ ಗೆದ್ದುಕೊಂಡಿದ್ದರು.
ರಾಮಚಾರಿ ಧಾರವಾಹಿಯಲ್ಲಿ ಚಾರು-ಚಾರಿ ಮದುವೆಯಾಗಿ ಎಷ್ಟೋ ಸಮಯವಾಗಿದೆ. ಆದರೆ ಮಾವ ಒಪ್ಪಿಕೊಂಡಿರಲಿಲ್ಲ ಎಂದು ಗಂಡ-ಹೆಂಡತಿ ಇಷ್ಟು ದಿನ ಪ್ರೇಮಿಗಳಾಗಿಯೇ ಇದ್ದರು. ಈಗ ಚಾರು-ಚಾರಿಗೆ ಮರು ಮದುವೆಯಾಗಿದ್ದು ಮನೆಯವರೆಲ್ಲಾ ಸೇರಿ ಹೊಸ ಜೋಡಿಗೆ ಫಸ್ಟ್ ನೈಟ್ ಅರೇಂಜ್ ಮಾಡಿದ್ದಾರೆ.
ಇವರಿಬ್ಬರ ಫಸ್ಟ್ ನೈಟ್ ತಡೆಯಲು ಬಂದ ವಿಲನ್ ಮಾನ್ಯತಾ, ವೈಶಾಖಾ ಮಾಡಿದ ಎಡವಟ್ಟಿನಿಂದ ಕಿಡ್ನ್ಯಾಪ್ ಆಗಿದ್ದಾಳೆ. ಹೀಗಾಗಿ ಈಗ ಚಾರು-ಚಾರಿ ಪ್ರೇಮದ ಗಳಿಗೆ. ಇಬ್ಬರ ರೊಮ್ಯಾಂಟಿಕ್ ಕ್ಷಣ ಕಳೆಯಲು ವೀಕ್ಷಕರು ಕಾದಿದ್ದರು. ಇದೀಗ ಆ ಗಳಿಗೆ ಬಂದೇ ಬಿಟ್ಟಿದೆ. ಸೋಮವಾರದ ಸಂಚಿಕೆಯಲ್ಲಿ ಈ ಸುಂದರ ಕ್ಷಣವನ್ನು ವೀಕ್ಷಿಸಬಹುದು.