Select Your Language

Notifications

webdunia
webdunia
webdunia
Sunday, 6 April 2025
webdunia

ವಿಚ್ಛೇಧನದ ಬಳಿಕವೂ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಚಂದನ್-ನಿವೇದಿತಾ ಗೌಡ

Niveditha Gowda

Sampriya

ಬೆಂಗಳೂರು , ಶುಕ್ರವಾರ, 30 ಆಗಸ್ಟ್ 2024 (19:38 IST)
Photo Courtesy X
ಬೆಂಗಳೂರು: ಡಿವೋರ್ಸ್ ವಿಚಾರವಾಗಿ ಈಚೆಗೆ ಸುದ್ದಿಯಾಗಿದ್ದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇದೀಗ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ.

ದಾಂಪತ್ಯದಲ್ಲಿ ಬಿರುಕುಕಂಡ ಬಳಿಕ ಇಬ್ಬರು ಡಿವೋರ್ಸ್ ಪಡೆದು ದೂರವಾಗಿದ್ದರೆ. ಈ ಸುದ್ದಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಇಬ್ಬರು ಒಟ್ಟಾಗಿ ಪ್ರೆಸ್‌ಮೀಟ್ ಕರೆದು ವಿಚ್ಚೇಧನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದರು.

ಇದೀಗ ಇದೆಲ್ಲದರಿಂದ ಹೊರಬಂದಿರುವ ಇವರು ತಮ್ಮ ಕೆರಿಯರ್ ಬಗ್ಗೆ ಚಿಂತಿಸಿದ್ದಾರೆ. ಅದರಂತೆ ಇದೀಗ ಇವರಿಬ್ಬರು ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.  ಶ್ರೀ ಚೌಡೇಶ್ವರಿ ಸಿನಿ ಕಂಬೈನ್ಸ್‌ನಲ್ಲಿ ತಯಾರಾದ ಸಿನಿಮಾಗೆ ಪುನೀತ್ ಶ್ರೀನಿವಾಸ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಇದನ್ನು ನಿವೇದಿತಾ ಗೌಡ ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಸಿನಿಮಾಗೆ ಈ ಹಿಂದೆ ಕ್ಯಾಂಡಿಕ್ರಶ್ ಎಂದು ಟೈಟಲ್ ಇಡಲಾಗಿತ್ತು. ಇದೀಗ ಮುದ್ದು ರಾಕ್ಷಸಿ ಎಂದು ಹೆಸರಿಡಲಾಗಿದೆ. ಈ ಸಿನಿಮಾ ಡಿವೋರ್ಸ್‌ಗೂ ಮುನ್ನಾವೇ ಸೆಟ್ ಏರಿದ್ದು, ಡಿವೋರ್ಸ್ ಬಳಿಕವೂ ಒಟ್ಟಿಗೆ ಇವರು ಅಭಿನಯಿಸಿದ್ದರು. ಸದ್ಯ ಸಿನಿಮಾದ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ಆಫರ್ ಗಿಟ್ಟಿಸಿಕೊಂಡ ಶಾಸಕ ಪ್ರದೀಪ್ ಈಶ್ವರ್