ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಮಾನ್ಯವಾಗಿ ರಾಜಕೀಯ ವಿಚಾರಗಳ ಬಗ್ಗೆ, ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ.
ಆದರೆ ಮಂಗಳೂರಿನ ಕಾಂಗ್ರೆಸ್ ನಾಯಕ ಮಿಥುನ್ ರೈ ಇತ್ತೀಚೆಗೆ ಉಡುಪಿಯ ವಿಶ್ವ ಪ್ರಸಿದ್ಧ ಕೃಷ್ಣ ದೇವಾಲಯಕ್ಕೆ ಜಾಗ ಕೊಟ್ಟಿದ್ದು ಓರ್ವ ಮುಸ್ಲಿಂ ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಇದಕ್ಕೆ ಪೇಜಾವರ ಶ್ರೀಗಳು ಕೂಡಾ ಸ್ಪಷ್ಟನೆ ಕೊಟ್ಟಿದ್ದು, ಮುಸ್ಲಿಮರು ಜಾಗ ಕೊಟ್ಟಿದ್ದಲ್ಲ ಎಂದು ತಿರುಗೇಟನ್ನೂ ನೀಡಿದ್ದರು. ಬಳಿಕ ಮಿಥುನ್ ರೈ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು.
ಇದೀಗ ರಕ್ಷಿತ್ ಶೆಟ್ಟಿ ಆ ವಿವಾದದ ಬಗ್ಗೆ ಟ್ವೀಟ್ ಮಾಡಿದ್ದು, ದೇವಾಲಯಗಳ ನಗರಿ ಉಡುಪಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಿಮಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಸಾರ್ವಜನಿಕವಾಗಿ ನಾನ್ಸೆನ್ಸ್ ಯಾಕೆ ಮಾತನಾಡುತ್ತೀರಿ? ಎಂದು ಮಿಥುನ್ ರೈ ಹೆಸರು ಉಲ್ಲೇಖಿಸದೇ ಕಿಡಿ ಕಾರಿದ್ದಾರೆ.