ಚೆನ್ನೈ : ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಅನ್ನಾಥೆ ಚಿತ್ರದ ಶೂಟಿಂಗ್ ಈ ಹಿಂದೆ ಸ್ಥಗಿತಗೊಂಡಿತ್ತು. ಆದರೆ ಮತ್ತೆ ಶೂಟಿಂಗ್ ಶುರು ಮಾಡಲು ಮುಂದಾಗಿದಾದ ಇದೀಗ ಮತ್ತೆ ಮುಂದಕ್ಕೆ ಹಾಕಲಾಗಿದೆ ಎನ್ನಲಾಗಿದೆ.
ಈ ಹಿಂದೆ ಕೊರೊನಾ ಕಾರಣದಿಂದ ಮತ್ತು ರಜನೀಕಾಂತ್ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಅನ್ನಾಥೆ ಚಿತ್ರದ ಶೂಟಿಂಗ್ ನಿಲ್ಲಿಸಲಾಗಿತ್ತು, ಈಗ ವಿರಾಮದ ಬಳಿಕ ಮತ್ತೊಮ್ಮೆ ಅನ್ನಾಥೆ ಚಿತ್ರದ ಶೂಟಿಂಗ್ ಚೆನ್ನೈನ ಗ್ರ್ಯಾಂಡ್ ಸೆಟ್ ಗಳಲ್ಲಿ ಪುನರಾರಂಭಗೊಂಡಿದ್ದು, ಮುಂದಿನ ಮೂವತ್ತು ದಿನಗಳವರೆಗೆ ಮುಂದುವರಿಸಲು ಯೋಜಿಸಲಾಗಿತ್ತು.
ಆದರೆ ತಮಿಳುನಾಡಿನಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿದ್ದ ಕಾರಣ ಮತ್ತೆ ಚಿತ್ರದ ಶೂಂಟಿಂಗ್ ಮುಂದೂಡಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ.