ಹೈದರಾಬಾದ್ : ಲವ್ ಸ್ಟೋರಿ ಚಿತ್ರದ ಸಾರಂಗಾ ದರಿಯಾ ಹಾಡು ಫೆಬ್ರವರಿ 28ರಂದು ಬಿಡುಗಡೆಯಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಟಾಪ್ ಟ್ರೆಂಡಿಂಗ್ ವಿಡಿಯೋ ಆಗಿ ಮಾರ್ಪಟ್ಟಿದೆ.
ಸಾಯಿ ಪಲ್ಲವಿ ಹಾಗೂ ನಾಗ ಚೈತನ್ಯ ಅವರು ಶೇಖರ್ ಕಮ್ಮಲಾ ನಿರ್ದೇಶನದ ಲವ್ ಸ್ಟೋರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲಂಗಾಣ ಜಾನಪದ ಗೀತೆಯಾದ ಸಾರಂಗಾ ದರಿಯಾ ಲವ್ ಸ್ಟೋರಿ ಚಿತ್ರದ ಹಾಡನ್ನು ಇತ್ತೀಚೆಗೆ ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.
ಇದು ಯುಟ್ಯೂಬ್ ನಲ್ಲಿ 15 ದಿನಗಳಲ್ಲಿ 50 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಆ ಮೂಲಕ ಈ ಹಾಡು 27 ದಿನಗಳಲ್ಲಿ ಅಲಾ ವೈಕುಂಠಪುರರಾಮುಲಿ ಚಿತ್ರ ಬುಟ್ಟಾ ಬೊಮ್ಮ ಹಾಡಿನ ದಾಖಲೆಯನ್ನು ಮುರಿದಿದೆ ಎನ್ನಲಾಗಿದೆ.