Select Your Language

Notifications

webdunia
webdunia
webdunia
webdunia

ರಜನೀಕಾಂತ್ ಗೆ ಅನಾರೋಗ್ಯ: ಲೇಟಸ್ಟ್ ಹೆಲ್ತ್ ಅಪ್ ಡೇಟ್ ಇಲ್ಲಿದೆ

Rajinikanth

Krishnaveni K

ಚೆನ್ನೈ , ಮಂಗಳವಾರ, 1 ಅಕ್ಟೋಬರ್ 2024 (10:08 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಗೆ ಅನಾರೋಗ್ಯ ಕಾಡಿದ್ದು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಲೇಟೆಸ್ಟ್ ಮಾಹಿತಿ ನೀಡಿದ್ದಾರೆ.

ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ರಜನೀಕಾಂತ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೃದಯ ರೋಗ ತಜ್ಞ ಸಾಯಿ ಸತೀಶ್ ರಜನೀಕಾಂತ್ ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೃದಯ ಪರೀಕ್ಷೆಯನ್ನೂ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ರಜನೀಕಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದ ಬೆನ್ನಲ್ಲೇ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.

ರಜನೀಕಾಂತ್ ಗೆ ಈಗ 73 ವರ್ಷ ವಯಸ್ಸು. ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿರುವುದು ಆತಂಕಕಾರೀ ವಿಚಾರವಾಗಿದೆ. ರಜನೀಕಾಂತ್ ನಟನೆಯ ವೆಟ್ಟೈಯಾನ್ ಸಿನಿಮಾ ರಿಲೀಸ್ ಹೊಸ್ತಿಲಲ್ಲೇ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡಿದೆ. ಇದರಿಂದ ಫ್ಯಾನ್ಸ್ ಬೇಸರಕ್ಕೊಳಗಾಗಿದ್ದಾರೆ.

ರಕ್ತನಾಳಗಳ ಸಮಸ್ಯೆ ಸರಿಪಡಿಸಲು ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ರಜನೀಕಾಂತ್ ಆರೋಗ್ಯದ ಸ್ಥಿತಿ ತಿಳಿಯುತ್ತಿದ್ದಂತೇ ಸಿಎಂ ಎಂಕೆ ಸ್ಟಾಲಿನ್ ಕೂಡಾ ಆರೋಗ್ಯ ವಿಚಾರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಾಂಪತ್ಯದಲ್ಲಿ ಕಲಹ ಸುದ್ದಿ ಬೆನ್ನಲ್ಲೇ ವಿಡಿಯೋ ಹಂಚಿಕೊಂಡ ಸಮೀರ್-ಶ್ರಾವಣಿ ದಂಪತಿ