Select Your Language

Notifications

webdunia
webdunia
webdunia
webdunia

ಚೆನ್ನೈ: ಹಣದ ವಿಚಾರಕ್ಕೆ ಲೈಂಗಿಕ ಕಾರ್ಯಕರ್ತೆಯನ್ನೇ ಕೊಂದ ಗ್ರಾಹಕ

Chennai Sex Worker

Sampriya

ಚೆನ್ನೈ , ಗುರುವಾರ, 19 ಸೆಪ್ಟಂಬರ್ 2024 (19:55 IST)
ಚೆನ್ನೈ: ಇಲ್ಲಿನ ತೊರೈಪಕ್ಕಂ ಪ್ರದೇಶದಲ್ಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ತುಂಡರಿಸಿದ ದೇಹದ ಭಾಗಗಳನ್ನು ತೊರೈಪಕ್ಕಂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೃತ ಮಹಿಳೆ ಸೆಕ್ಸ್ ವರ್ಕರ್ ಎಂದು ತಿಳಿದುಬಂದಿದ್ದು, ಗ್ರಾಹಕನೇ ಆಕೆಯನ್ನು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಗುರುವಾರ ಬೆಳಗ್ಗೆ ಚೆನ್ನೈನ ತೋರೈಪಕ್ಕಂ ಪ್ರದೇಶದಲ್ಲಿ ಹಣದ ವಿವಾದದ ಹಿನ್ನೆಲೆಯಲ್ಲಿ ಸೆಕ್ಸ್‌ ವರ್ಕರ್‌ ಅನ್ನು ಕೊಂದು, ಆಕೆಯ ತುಂಡರಿಸಿದ ದೇಹದ ಭಾಗಗಳನ್ನು ಸೂಟ್‌ಕೇಸ್‌ನಲ್ಲಿ ವಿಲೇವಾರಿ ಮಾಡಿದ್ದಾನೆ.

ತೊರೈಪಕ್ಕಂ ಪೊಲೀಸರು ಸೂಟ್‌ಕೇಸ್‌ನಿಂದ ಮಹಿಳೆಯ ತುಂಡರಿಸಿದ ದೇಹದ ಭಾಗಗಳನ್ನು ವಶಪಡಿಸಿಕೊಂಡರು, ನಂತರ ತನಿಖೆಯನ್ನು ಪ್ರಾರಂಭಿಸಲಾಯಿತು.

ಪ್ರಾಥಮಿಕ ತನಿಖೆಯ ಪ್ರಕಾರ, ಆಕೆಯನ್ನು ಬೇರೆಡೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ ಮತ್ತು ಆಕೆಯ ದೇಹವನ್ನು ಹೊಂದಿರುವ ಸೂಟ್‌ಕೇಸ್ ಅನ್ನು ತೊರೈಪಾಕ್ಕಂನ ಐಟಿ ಕಾರಿಡಾರ್ ಬಳಿಯ ವಸತಿ ಪ್ರದೇಶದಲ್ಲಿ ಎಸೆದಿದ್ದಾರೆ.

ಬಂಧಿತನನ್ನು ಶಿವಗಂಗಾ ಜಿಲ್ಲೆಯ ಮಣಿಕಂದನ್ ಎಂದು ಗುರುತಿಸಲಾಗಿದ್ದು, ಕೊಲೆಯಾದ 32ವರ್ಷದ ಮಹಿಳೆ ಮಾಧವರಂ ಮೂಲದವರು.

ವಿಚಾರಣೆ ವೇಳೆ ಮಣಿಕಂದನ್ ಅವರು ಹಣದ ವಿವಾದದ ಹಿನ್ನೆಲೆಯಲ್ಲಿ ಸುತ್ತಿಗೆಯಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ