ಹೈದರಾಬಾದ್ : ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ನಿರ್ದೇಶಕ ರಾಜಮೌಳಿ ಅವರು ಮುಂಬರುವ ಬಹುನಿರೀಕ್ಷೆಯ ಚಿತ್ರ “ಆರ್ ಆರ್ ಆರ್ “ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಇತ್ತೀಚೆಗೆ ಚಿತ್ರರಂಗದಲ್ಲಿ ಕೊರೊನಾ ಹಾವಳಿಯಿಂದ ಬಿಡುಗಡೆಗೆ ಸಿದ್ಧವಾದ ಕೆಲವು ಚಿತ್ರಗಳ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗುತ್ತಿದೆ. ಅದೇ ರೀತಿ ರಾಜಮೌಳಿ “ಆರ್ ಆರ್ ಆರ್ “ ಚಿತ್ರವನ್ನು ನಿರ್ಮಾಪಕರು ಮುಂದೂಡಿದ್ದಾರೆ ಮತ್ತು ಹೊಸ ಬಿಡುಗಡೆಯ ದಿನಾಂಕವನ್ನು ಹುಡುಕುತ್ತಿದ್ದಾರೆ ಎನ್ನಲಾಗಿತ್ತು.
ಆದರೆ ಮೂಲದ ಪ್ರಕಾರ ಚಿತ್ರದ ಚಿತ್ರೀಕರಣ ವೇಗವಾಗಿ ನಡೆಯುತ್ತಿದ್ದು, ಚಿತ್ರವನ್ನು ಮುಂದೂಡಲಾಗುವುದಿಲ್ಲ. ಆಲಿಯಾ ಭಟ್ ಅವರು ಕೊರೊನಾ ಸೋಂಕಿನಿಂದ ಗುಣಮುಖಳಾಗಿ ಶೀಘ್ರದಲ್ಲಿಯೇ ಸೆಟ್ ಗೆ ಬರಲಿದ್ದಾರೆ. ಹಾಗಾಗಿ ಚಿತ್ರ ಮೊದಲೇ ನಿಗದಿಯಾದಂತೆ ಅಕ್ಟೋಬರ್ 13ರಂದೇ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದ್ದಾರೆ ಎನ್ನಲಾಗಿದೆ.