Select Your Language

Notifications

webdunia
webdunia
webdunia
webdunia

ರಾಣಾ ದಗ್ಗುಬಾಟಿ ‘ವಿರಾಟಾ ಪರ್ವ’ ಚಿತ್ರ ಬಿಡುಗಡೆ ಮುಂದೂಡಿಕೆ

ರಾಣಾ ದಗ್ಗುಬಾಟಿ ‘ವಿರಾಟಾ ಪರ್ವ’ ಚಿತ್ರ ಬಿಡುಗಡೆ ಮುಂದೂಡಿಕೆ
ಹೈದರಾಬಾದ್ , ಗುರುವಾರ, 15 ಏಪ್ರಿಲ್ 2021 (15:02 IST)
ಹೈದರಾಬಾದ್ : ಫಿಡಾ ಖ್ಯಾತಿಯ ಸಾಯಿ ಪಲ್ಲವಿ ಅವರು ರಾಣಾ ದಗ್ಗುಬಾಟಿ ಅವರೊಂದಿಗೆ ಮುಂಬರುವ ವಿರಾಟಾ ಪರ್ವ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆಯಂತೆ.

ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಅವರು ನಕ್ಸಲೈಟ್ ಪಾತ್ರದಲ್ಲಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಏಪ್ರಿಲ್ 30ರಂದು ಬಿಡುಗಡೆಯಾಗಿ  ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಬೇಕಿದ್ದ ಈ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿರುವುದಾಗಿ ನಿರ್ಮಾಣ ಸಂಸ್ಥೆಗಳಾದ ಸುರೇಶ್ ಪ್ರೊಡಕ್ಷನ್ಸ್ ಮತ್ತು ಎಸ್ ಎಲ್ ವಿ ಸಿನಿಮಾಸದ ತಂಡ ಜಂಟಿಯಾಗಿ ಪ್ರಕಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಾಪಕ ಬಂಡ್ಲ ಗಣೇಶ್ ಗೆ ಕೊರೊನಾ; ಆರೋಗ್ಯ ಸ್ಥಿತಿ ಗಂಭೀರ