ಹೈದರಾಬಾದ್ : ಖ್ಯಾತ ಚಿತ್ರ ನಿರ್ಮಾಪಕ ಕೊರಟಾಲ ಶಿವ ತಮ್ಮ ಮುಂದಿನ ಯೋಜನೆಯನ್ನು ಖ್ಯಾತ ನಟ ಜೂನಿಯರ್ ಎನ್ ಟಿಆರ್ ಅವರೊಂದಿಗೆ ಮಾಡುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಈ ಹಿಂದೆ ಜನತಾ ಗ್ಯಾರೇಜ್ ಚಿತ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡಿದ ಜೂನಿಯರ್ ಎನ್ ಟಿಆರ್ ಮತ್ತು ಕೊರಟಾಲ ಶಿವ ಈಗ ಮತ್ತೆ ಒಂದಾಗಲಿದ್ದಾರೆ. ಈ ಚಿತ್ರ ಯುವ ಸುದ್ಧ ಆರ್ಟ್ಸ್ ಮತ್ತು ಎನ್ ಟಿಆರ್ ಆರ್ಟ್ಸ್ ನಿರ್ಮಾಣದಲ್ಲಿ ಮೂಡಿಬರಲಿದೆ. ಇದೀಗ ಈ ಚಿತ್ರದಲ್ಲಿ ಮುಂಬೈ ಬ್ಯೂಟಿ ಕಿಯಾರಾ ಅಡ್ವಾಣಿ ಅವರು ನಾಯಕಿಯಾಗಿ ಜೂನಿಯರ್ ಎನ್ ಟಿಆರ್ ಅವರ ಜೊತೆ ನಟಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಪ್ಯಾನ್ ಇಂಡಿಯಾ ಚಿತ್ರವಾಗಲಿರುವ ಎನ್ ಟಿಆರ್ 30 ಚಿತ್ರ ಈ ವರ್ಷದ ಜೂನ್ ಅಂತ್ಯದ ವೇಳೆಗೆ ಸೆಟ್ಟೇರಲಿದೆ. ಮುಂದಿನ ವರ್ಷ ಏಪ್ರಿಲ್ 29ರಂದು ಬಹು ಭಾಷೆಗಳಲ್ಲಿ ಪರದೆಯ ಮೇಲೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.