Publish Date: Tue, 22 Sep 2020 (09:34 IST)
Updated Date: Tue, 22 Sep 2020 (09:37 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾಗೆ ಇನ್ನೂ ಮೂರು ದಿನ ನ್ಯಾಯಾಂಗ ಬಂಧನ ಮುಂದುವರಿಯಲಿದೆ.
ಸೆಪ್ಟೆಂಬರ್ 24 ರವರೆಗೆ ನಟಿಮಣಿಯರಿಗೆ ನ್ಯಾಯಾಂಗ ಬಂಧನ ವಿಸ್ತರಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇಬ್ಬರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸದ್ಯಕ್ಕೆ ಜಾಮೀನು ನೀಡಲು ಸಾಧ‍್ಯವಿಲ್ಲ ಎಂದಿದೆ. ಬಂಧಿತ ನಟಿಯರಿಗೆ ಇನ್ನಷ್ಟು ಕ್ರಿಮಿನಲ್ ಗಳ ಜತೆ ಲಿಂಕ್ ಇರುವ ಕಾರಣಕ್ಕೆ ಸದ್ಯಕ್ಕೆ ಅವರಿಗೆ ಜಾಮೀನು ನೀಡಿದರೆ ವಿಚಾರಣೆಗೆ ತೊಡಕಾಗುತ್ತದೆ. ಇನ್ನು, ನಟಿ ರಾಗಿಣಿ ದ್ವಿವೇದಿಗೆ ಪ್ರಭಾವಿಗಳ ಜತೆ ಲಿಂಕ್ ಇದ್ದು, ಆಕೆಯ ವಿರುದ್ಧ ಸುಮಾರು 20 ವರ್ಷಗಳಷ್ಟು ಜೈಲು ಶಿಕ್ಷೆ ಅನುಭವಿಸುವ ಆರೋಪಗಳಿವೆ ಎಂದು ಸಿಸಿಬಿ ಪರ ಪೊಲೀಸರು ವಾದಿಸಿದ್ದಾರೆ.