Publish Date: Sat, 19 Dec 2020 (09:13 IST)
Updated Date: Sat, 19 Dec 2020 (09:15 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಈಗ ಹೊರಗೆ ಬರಲು ಶತ ಪ್ರಯತ್ನ ನಡೆಸಿದ್ದಾರೆ.
ಅವರ ಜತೆಗೆ ಬಂಧಿತರಾಗಿದ್ದ ಸಂಜನಾ ಗಲ್ರಾನಿ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಹೀಗಾಗಿ ರಾಗಿಣಿ ಕೂಡಾ ಹೊರಬರಲು ಪ್ರಯತ್ನ ನಡೆಸಿದ್ದಾರೆ. ನಾನೇನು ತಪ್ಪು ಮಾಡಿಲ್ಲ, ಬಿಟ್ಟು ಬಿಡಿ ಎಂದು ಜೈಲಿನ ಅಧಿಕಾರಿಗಳ ಬಳಿ ಹೇಳುತ್ತಲೇ ಇದ್ದಾರೆ. ಅಲ್ಲದೆ, ಅವರ ಪೋಷಕರು ವಕೀಲರೊಂದಿಗೆ ಅವರನ್ನು ಹೊರತರುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಂಜನಾಗೂ ಮೊದಲೇ ರಾಗಿಣಿ ಬಂಧನವಾಗಿತ್ತು. ಈಗಾಗಲೇ ಅವರು ಮೂರು ತಿಂಗಳು ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದಾರೆ.