Select Your Language

Notifications

webdunia
webdunia
webdunia
webdunia

ಯಶ್-ಸಂಜಯ್ ದತ್ ಒಂದೇ ಅಪ್ಪುಗೆಗೆ ನನ್ನ ಟಿ ಶರ್ಟ್ ಗತಿ ಹೀಗಾಗಿದೆ ಎಂದ ಕೆಜಿಎಫ್ ನಿರ್ಮಾಪಕ!

ಯಶ್-ಸಂಜಯ್ ದತ್ ಒಂದೇ ಅಪ್ಪುಗೆಗೆ ನನ್ನ ಟಿ ಶರ್ಟ್ ಗತಿ ಹೀಗಾಗಿದೆ ಎಂದ ಕೆಜಿಎಫ್ ನಿರ್ಮಾಪಕ!
ಬೆಂಗಳೂರು , ಶುಕ್ರವಾರ, 18 ಡಿಸೆಂಬರ್ 2020 (08:55 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಸಂಜಯ್ ದತ್ ಕೆಜಿಎಫ್ 2 ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಪೂರ್ತಿಗೊಳಿಸಿದ ಬಗ್ಗೆ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ವಿಶಿಷ್ಟವಾಗಿ ಮಾಹಿತಿ ನೀಡಿದ್ದಾರೆ.


ಇಬ್ಬರೂ ಕ್ಲೈಮ್ಯಾಕ್ಸ್ ನಲ್ಲಿ ಎಷ್ಟು ಜಿದ್ದಾಜಿದ್ದಿನ ಫೈಟ್ ಮಾಡಿದ್ದಾರೆ ಎಂಬುದನ್ನು ತಮ್ಮ ಕೊಳೆಯಾದ ಟಿ ಶರ್ಟ್ ತೋರಿಸುವ ಮೂಲಕ ಕಾರ್ತಿಕ್ ಗೌಡ ನೆಟ್ಟಿಗರಿಗೆ ಮಾಹಿತಿ ನೀಡಿದ್ದಾರೆ. ಕ್ಲೈಮ್ಯಾಕ್ಸ್ ಫೈಟ್ ಬಳಿಕ ಇಬ್ಬರೂ ನನ್ನನ್ನು ತಬ್ಬಿಕೊಂಡ ಮೇಲೆ ನನ್ನ ಟಿ ಶರ್ಟ್ ಗತಿ ಹೀಗಾಗಿದೆ ಎಂದು ಕೊಳೆಯಾದ ಟಿ ಶರ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಟಿ ಶರ್ಟ್ ನೋಡಿ ಅನೇಕ ಫ್ಯಾನ್ಸ್ ಪ್ರತಿಕ್ರಿಯಿಸಿದ್ದು ಈ ಟಿ ಶರ್ಟ್ ನಮಗೆ ಕೊಡಿ ಅಣ್ಣಾ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಮುರಳಿ ಜತೆ ಪ್ರಶಾಂತ್ ನೀಲ್ ಸಿನಿಮಾ: ಆದರೆ ಈ ಬಾರಿ ನಿರ್ದೇಶಕರು ಬೇರೆ