ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ ನಿನ್ನೆ ರಾತ್ರಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಸುಪ್ರೀಂಕೋರ್ಟ್ ಅವರಿಗೆ ಕಳೆದ ವಾರ ಜಾಮೀನು ಮಂಜೂರು ಮಾಡಿತ್ತು. ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ನಿನ್ನೆಯಷ್ಟೇ ಹೊರಬಂದಿದ್ದಾರೆ. ಇದರೊಂದಿಗೆ ಅವರ 140 ಕ್ಕೂ ಹೆಚ್ಚು ದಿನಗಳ ಜೈಲು ವಾಸ ಅಂತ್ಯವಾಗಿದೆ. ಜೈಲಿನಿಂದ ಹೊರಬರುತ್ತಿದ್ದಂತೇ ನೇರವಾಗಿ ಜಡೆ ಮುನೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ರಾಗಿಣಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸಾಕಷ್ಟು ವಿಷಯಗಳನ್ನು ಹೇಳುವುದಿದೆ. ಸದ್ಯದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ. ಸದ್ಯಕ್ಕೆ ಕುಟುಂಬದವರ ಜೊತೆ ಕಾಲ ಕಳೆಯಬೇಕಿದೆ ಎಂದು ಹೇಳಿ ಮನೆಗೆ ತೆರಳಿದ್ದಾರೆ.