ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆಯಿಂದ ದೂರವೇ. ಆದರೆ ಅಪರೂಪಕ್ಕೊಮ್ಮೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಈ ಬಾರಿ ದರ್ಶನ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ ರಿಯಾಲಿಟಿ ಶೋನ ಪುಟಾಣಿ ಸ್ಪರ್ಧಿಗಳಿಗೆ ಸರ್ಪೈಸ್ ನೀಡಿದ್ದಾರೆ. ಶೋನಲ್ಲಿ ದರ್ಶನ್ ಹಾಡಿಗೆ ಮಕ್ಕಳು ಹೆಜ್ಜೆ ಹಾಕಿದ್ದರು. ಈ ನೃತ್ಯ ನೋಡಿ ಇಂಪ್ರೆಸ್ ಆದ ರಕ್ಷಿತಾ ವೇದಿಕೆಯಲ್ಲೇ ನೇರವಾಗಿ ತಮ್ಮ ಫೋನ್ ನಿಂದ ದರ್ಶನ್ ಗೆ ಕರೆ ಮಾಡಿ ಪುಟಾಣಿಗಳ ಕೈಯಲ್ಲಿ ಮಾತನಾಡಿಸಿದ್ದಾರೆ. ಈ ವೇಳೆ ಮಕ್ಕಳೊಂದಿಗೆ ಮಾತನಾಡಿದ ದರ್ಶನ್ ನನಗೂ ಡ್ಯಾನ್ಸ್ ಹೇಳಿಕೊಡಿ ಎಂದು ಕೇಳಿಕೊಂಡು ಅವರ ಮುಖದಲ್ಲಿ ನಗು ತರಿಸಿದ್ದಾರೆ.