Publish Date: Mon, 25 Jan 2021 (09:30 IST)
Updated Date: Mon, 25 Jan 2021 (09:31 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸಬರೇ ಕ್ರಿಯೇಟಿವ್ ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಅಂತಹದ್ದೇ ಹೊಸಬರ ತಂಡವೊಂದು ಈಗ ಹೊಸ ಸಿನಿಮಾದೊಂದಿಗೆ ತೆರೆಗೆ ಬರಲು ಸಿದ್ಧತೆ ನಡೆಸಿದೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ವಿಶಿಷ್ಟ ಟೈಟಲ್ ನೊಂದಿಗೆ ಹೊಸ ಸಿನಿಮಾವೊಂದು ಬರುತ್ತಿದ್ದು, ಇದರ ಟೀಸರ್ ನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜನವರಿ 28 ರಂದು ಬಿಡುಗಡೆ ಮಾಡಲಿದ್ದಾರೆ. ಹೊಸಬರ ತಂಡವೇ ಈ ಸಿನಿಮಾ ಮಾಡಿದ್ದರೂ ಇದರ ಕ್ರಿಯೇಟಿವ್ ಪ್ರಚಾರದಿಂದಾಗಿ ಗಮನ ಸೆಳೆಯುತ್ತಿದೆ. ಟೀಸರ್ ಬಿಡುಗಡೆ ಬಗ್ಗೆ ಚಿತ್ರತಂಡ ಮೊನಾಲಿಸಾ ಸೇರಿದಂತೆ ಕಲಾತ್ಮಕ ಚಿತ್ರಗಳು ಪರಸ್ಪರ ಸಂಭಾಷಣೆ ನಡೆಸುತ್ತಿರುವಂತೆ ಮಾಡಿ ಟೀಸರ್ ನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡುತ್ತಿರುವ ಮಾಹಿತಿ ನೀಡಿದೆ. ಇನ್ನೊಂದು ವಿಶೇಷವೆಂದರೆ ಈ ಸಿನಿಮಾದ ಜೊತೆಗೆ ಸಿನಿಮಾ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸಿನಿಮಾ ಎಂಬ ಕ್ರಿಯೇಟಿವ್ ಅಡಿಬರಹವನ್ನೂ ನೀಡಲಾಗಿದೆ. ಹೀಗಾಗಿ ಈ ಟೀಸರ್ ಬಗ್ಗೆ ನೆಟ್ಟಿಗರು ಭಾರೀ ಕುತೂಹಲ ವ್ಯಕ್ತಪಡಿಸಿದ್ದಾರೆ.