Publish Date: Sun, 25 Nov 2018 (09:15 IST)
Updated Date: Sun, 25 Nov 2018 (09:23 IST)
ಬೆಂಗಳೂರು: ಡಾ. ರಾಜ್ ಕುಮಾರ್, ವಿಷ್ಣುವರ್ಧನ್ ರೀತಿಯಲ್ಲೇ ಜನಾನುರಾಗಿಯಾಗಿದ್ದ ಸಿನಿಮಾ ನಟನೆಂದರೆ ಅಂಬರೀಷ್. ಹೀಗಾಗಿ ಅವರ ಅಂತ್ಯ ಕ್ರಿಯೆ ಎಲ್ಲಿ ನಡೆಯಬೇಕು ಎಂಬ ಬಗ್ಗೆ ಈಗಾಗಲೇ ಚರ್ಚೆಗಳು ಶುರುವಾಗಿದೆ.
ಡಾ. ರಾಜ್ ಸಮಾಧಿ ಪಕ್ಕದಲ್ಲೇ ಅಂಬರೀಷ್ ಸಮಾಧಿ ಮಾಡಲಾಗುತ್ತದೆಯೇ ಎಂಬ ಬಗ್ಗೆ ಡಾ. ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಬಳಿ ಪತ್ರಕರ್ತರು ಪ್ರಶ್ನಿಸಿದಾಗ ‘ಇದನ್ನೆಲ್ಲಾ ತೀರ್ಮಾನ ಮಾಡಲು ನಾವ್ಯಾರು? ಸರ್ಕಾರ, ಕಲಾವಿಧರ ಸಂಘ ಏನು ನಿರ್ಧರಿಸುತ್ತದೋ ಅದಕ್ಕೆ ನಾವು ಬದ್ಧ’ ಎಂದಿದ್ದಾರೆ.
‘ಅಂಬರೀಷ್ 24 ಗಂಟೆಯೂ ಚಿತ್ರರಂಗದ ಬಗ್ಗೆ ಯೋಚಿಸುತ್ತಿದ್ದವರು. ಚಿತ್ರರಂಗಕ್ಕೆ ಅವರು ತಂದೆ ಸಮಾನರಾಗಿದ್ದರು. ಅವರ ದೇಹ ಮಾತ್ರ ಹೋಗಿದೆ ಅಷ್ಟೇ. ಆತ್ಮ ನಮ್ಮೊಂದಿಗೆ ಸದಾ ಇರುತ್ತದೆ. ನಮಗೆ ತಂದೆ ಇಲ್ಲ ಎನ್ನುವ ಕೊರತೆಯೇ ಇರಲಿಲ್ಲ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.