Select Your Language

Notifications

webdunia
webdunia
webdunia
webdunia

ಮಂಡ್ಯ ಬಸ್ ದುರಂತದ ಬಗ್ಗೆ ವಿಚಾರಿಸಿಕೊಂಡಿದ್ದ ಅಂಬಿ

ಮಂಡ್ಯ ಬಸ್ ದುರಂತದ ಬಗ್ಗೆ ವಿಚಾರಿಸಿಕೊಂಡಿದ್ದ ಅಂಬಿ
ಬೆಂಗಳೂರು , ಭಾನುವಾರ, 25 ನವೆಂಬರ್ 2018 (09:04 IST)
ಬೆಂಗಳೂರು: ಸಾರ್ವಜನಿಕರ ಕಷ್ಟಗಳ ಬಗ್ಗೆ ಅಂಬರೀಷ್ ಎಷ್ಟು ಕಳಕಳಿ ಹೊಂದಿದ್ದರು ಎಂಬುದಕ್ಕೆ ನಿನ್ನೆ ನಡೆದಿದ್ದ ಮಂಡ್ಯ ಬಸ್ ದುರಂತ ಪ್ರಕರಣವೂ ಸಾಕ್ಷಿ.


ಸಾವಿನ ಕೊನೆಯ ಕ್ಷಣದಲ್ಲೂ ಅಂಬಿ ತಮ್ಮ ಊರಿನಲ್ಲಿ ನಡೆದ ಈ ದುರ್ಘಟನೆ ಬಗ್ಗೆ ವಿಚಾರಸಿಕೊಂಡಿದ್ದರಂತೆ. ಮಂಡ್ಯ ಬಸ್‍ ದುರಂತದಲ್ಲಿ ಸಾವನ್ನಪ್ಪಿದವರ ಬಗ್ಗೆ ದೂರವಾಣಿ ಮೂಲಕ ವಿವರಣೆ ತಿಳಿದುಕೊಂಡಿದ್ದರಂತೆ ಎಂದು ವರದಿಯಾಗಿದೆ.

ಬಹುಶಃ ತಮ್ಮ ಹುಟ್ಟೂರಿನಲ್ಲಿ ನಡೆದಿದ್ದ ಈ ಸಾವಿನ ಬಗ್ಗೆ ಅಂಬರೀಷ್ ಕೊನೆಯ ಕ್ಷಣದಲ್ಲಿ ತೀರಾ ನೋವು ಅನುಭವಿಸಿರಬೇಕು. ಚಿತ್ರರಂಗದಲ್ಲಿರಲಿ, ತಮ್ಮ ಊರಿನ ಸಮಸ್ಯೆಗಳಿರಲಿ ಹಿರಿಯಣ್ಣನಂತೆ ಸಲಹೆ ಸೂಚನೆ ಕೊಡುವ ಅಂಬರೀಷ್ ಅದೇ ರೀತಿ ತಮ್ಮ ಜೀವನದ ಕೊನೆಯ ಕ್ಷಣವನ್ನೂ ಕಳೆದಿದ್ದು ನಿಜಕ್ಕೂ ವಿಶೇಷವೇ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನಟ ಅಂಬರೀಶ್ ಇನ್ನಿಲ್ಲ!