Select Your Language

Notifications

webdunia
webdunia
webdunia
webdunia

ಅಭಿಮಾನಿಯ ಕಷ್ಟಕ್ಕೆ ಮರುಗಿದ ಕಿಚ್ಚನ ಮನ

ಅಭಿಮಾನಿಯ ಕಷ್ಟಕ್ಕೆ ಮರುಗಿದ ಕಿಚ್ಚನ ಮನ
ಬೆಂಗಳೂರು , ಶನಿವಾರ, 24 ನವೆಂಬರ್ 2018 (07:02 IST)
ಬೆಂಗಳೂರು : ಅಭಿಮಾನಿಗಳ ಕಷ್ಟಕ್ಕೆ ಸ್ಪಂದಿಸುವ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಇದೀಗ ಅಭಿಮಾನಿಯೊಬ್ಬರ ತಾಯಿಯ ಚಿಕಿತ್ಸೆಗೆ ನೆರವು ನೀಡಿದ್ದಾರೆ.


ಟ್ವಿಟರ್‌ನಲ್ಲಿ ಆಕ್ಟಿವ್ ಆಗಿರೋ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಯೊಬ್ಬ ಟ್ವಿಟರ್ ಅಕೌಂಟ್‌ನಲ್ಲಿ ತಾಯಿ ಸ್ತನದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಧನ ಸಹಾಯ ಮಾಡಬೇಕಾಗಿ ವಿನಂತಿಸಿಕೊಂಡಿದ್ದಾರೆ. ತಾಯಿಗೆ ಈಗಾಗಲೆ ಎರಡು ಸಲ ಆಪರೇಷನ್ ಮಾಡಿಸಿದ್ದು, ಮತ್ತೊಮ್ಮೆ ರೋಗ ಉಲ್ಬಣಿಸಿದೆ. ಮತ್ತೊಮ್ಮೆ ಆಪರೇಷನ್ ಮಾಡಿಸಲು ವೈದ್ಯರು ಹೇಳಿದ್ದಾರೆ. ಇದರ ಚಿಕಿತ್ಸೆಗೆ ಸಹಾಯ ಮಾಡಬೇಕೆಂದೂ ಮನವಿ ಮಾಡಿಕೊಂಡಿದ್ದಾರೆ.


ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ , 'ನನ್ನ ಸಾಮರ್ಥ್ಯಕ್ಕಾಗುವಷ್ಟು ಸಹಾಯ ಮಾಡುತ್ತೇನೆ. ಆಸ್ಪತ್ರೆ ವಿಳಾಸ ಕಳುಹಿಸಿದರೆ, ನನ್ನವರು ಆಸ್ಪತ್ರೆಯೊಂದಿಗೆ ಮಾತನಾಡುತ್ತಾರೆ,' ಎಂದು ಭರವಸೆ ನೀಡಿದ್ದಾರೆ. 'ಎಲ್ಲವೂ ಸರಿ ಹೋಗಿ, ಬೇಗ ಗುಣ ಮುಖರಾಗಲೆಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ,'ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ಮುಖಕ್ಕೆ ಮಸಿ ಎರಚುತ್ತೇವೆ ಎಂದು ಕಳಿಂಗ ಸೇನೆ ಹೇಳಿದ್ಯಾಕೆ?