Publish Date: Sat, 24 Nov 2018 (16:17 IST)
Updated Date: Sat, 24 Nov 2018 (16:19 IST)
ಮಂಡ್ಯ: ಜಿಲ್ಲೆಯ ಕನಗನಮರಡಿಯಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 25 ಕ್ಕೆ ಏರಿಕೆಯಾಗಿದ್ದು, ಸ್ಥಳಕ್ಕೆ ಸಿಎಂ ಕುಮಾರಸ್ವಾಮಿ ಆಗಮಿಸಿದ್ದಾರೆ.
ಕನಗನಮರಡಿ ಬಳಿ ಕಾವೇರಿ ನಾಲೆಗೆ ಆಯತಪ್ಪಿ ಉರುಳಿ ಬಿದ್ದ ಖಾಸಗಿ ಬಸ್ ನಲ್ಲಿದ್ದ ಬಹುತೇಕ ಪ್ರಯಾಣಿಕರು ಸಾವನ್ನಪ್ಪಿದ್ದು, ಕೆಲವರು ಮಾತ್ರ ಪವಾಡ ಸದೃಶರಾಗಿ ಬದುಕಿದ್ದಾರೆ. ಇದುವರೆಗೆ 25 ಮೃತದೇಹಗಳನ್ನು ಹೊರ ತೆಗೆಯಲಾಗಿದೆ.
ಶ್ರೀನಿವಾಸ್ ಎಂಬವರ ಮಾಲಿಕತ್ವದ ಬಸ್ ಇದಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಮೃತರ ಕುಟುಂಬಕ್ಕೆ ಸಿಎಂ ಕುಮಾರಸ್ವಾಮಿ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.