Publish Date: Sat, 24 Nov 2018 (09:03 IST)
Updated Date: Sat, 24 Nov 2018 (09:05 IST)
ನವದೆಹಲಿ: ಕರ್ನಾಟಕ ಮೂಲದ, ಸೌರಾಷ್ಟ್ರ ಪರ ಆಡುವ ರಣಜಿ ಆಡುವ ಕ್ರಿಕೆಟಿಗ ರಾಬಿನ್ ಉತ್ತಪ್ಪ ಕಾಮೆಂಟರಿ ಮಾಡಿ ವಿವಾದಕ್ಕೀಡಾಗಿದ್ದಾರೆ.
ಬಿಸಿಸಿಐ ಕಾಮೆಂಟರಿ ಪ್ಯಾನೆಲ್ ಗೆ ಹೊಸದಾಗಿ ಸೇರ್ಪಡೆಯಾಗಿದ್ದ ರಾಬಿನ್ ಉತ್ತಪ್ಪ ಮೊನ್ನೆ ಗಬ್ಬಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದ ಕಾಮೆಂಟರಿ ಮಾಡಿದ್ದರು.
ಆದರೆ ಸದ್ಯಕ್ಕೆ ಸೌರಾಷ್ಟ್ರ ಗುಜರಾತ್ ವಿರುದ್ಧ ರಣಜಿ ಆಡುತ್ತಿರಬೇಕಾದರೆ ರಾಬಿನ್ ಉತ್ತಪ್ಪ ತಮ್ಮ ತಂಡ ಬಿಟ್ಟು ಕಾಮೆಂಟರಿ ಮಾಡಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ರಾಬಿನ್ ‘ನನಗೆ ಮೊಣಕಾಲಿನ ಗಾಯವಾಗಿದ್ದರಿಂದ ರಣಜಿ ಪಂದ್ಯ ಆಡಲು ಫಿಟ್ ಆಗಿರಲಿಲ್ಲ. ಈ ಮೂಲಕ ಗೊಂದಲ ಸೃಷ್ಟಿಸಿದವರಿಗೆ ನಾನು ಕಾಮೆಂಟರಿ ಮಾಡಿದ್ದಕ್ಕೆ ಸ್ಪಷ್ಟನೆ ನೀಡಲು ಬಯಸುತ್ತೇನೆ’ ಎಂದು ರಾಬಿನ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.