Select Your Language

Notifications

webdunia
webdunia
webdunia
webdunia

ಇಬ್ಬರು ಮಕ್ಕಳ ಹೆತ್ತ ಮೇಲೆ ರಾಧಿಕಾ ಪಂಡಿತ್ ಸಿನಿಮಾದಿಂದ ದೂರವಾಗ್ತಾರಾ?! ಅವರು ಹೇಳಿದ್ದೇನು ಗೊತ್ತಾ?

ರಾಧಿಕಾ ಪಂಡಿತ್
ಬೆಂಗಳೂರು , ಶನಿವಾರ, 29 ಜೂನ್ 2019 (09:46 IST)
ಬೆಂಗಳೂರು: ಮೊದಲ ಮಗುವಿಗೆ ನಾಮಕರಣ ಮಾಡಿದ ಖುಷಿಯಲ್ಲಿರುವಾಗಲೇ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿಕೊಂಡಿದ್ದರು.


ಮದುವೆಯಾದ ಮೇಲೆ ನಟಿಯರು ಸಿನಿಮಾ ರಂಗದಲ್ಲಿ ಮೊದಲಿನಂತೆ ಅಭಿನಯಿಸುವುದು ಕಡಿಮೆ. ಅದರಲ್ಲೂ ರಾಧಿಕಾ ಈಗ ಇಬ್ಬರು ಮಕ್ಕಳ ಅಮ್ಮನಾಗುತ್ತಿದ್ದಾರೆ. ಹೀಗಿರುವಾಗ ಮತ್ತೆ ಇನ್ನೆಂದೂ ಚಿತ್ರರಂಗಕ್ಕೆ ಬರೋದಿಲ್ವಾ ಅನ್ನೋದು ಅಭಿಮಾನಿಗಳ ಆತಂಕ. ಹಾಗಿರುವಾಗ ಅವರೇ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮದುವೆಯಾದ ನಂತರ ತಾವು ನಟಿಸಿದ ಆದಿ ಲಕ್ಷ್ಮಿ ಪುರಾಣ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಧಿಕಾ ಮದುವೆ ಆದ ಮೇಲೆ ಹೆಣ್ಮಕ್ಕಳ ಜೀವನ ಬದಲಾಗಲೇಬೇಕೆಂದಿಲ್ಲ. ಈಗ ಕುಟುಂಬಕ್ಕಾಗಿ ಎರಡು ವರ್ಷ ಸಮಯ ಮೀಸಲಿಡುತ್ತಿದ್ದೇನೆ. ಹಾಗಾಗಿ ಚಿತ್ರರಂಗದಿಂದ ದೂರವಿದ್ದೇನೆ. ಅದಾದ ಬಳಿಕ ನನಗೆ ಸೂಕ್ತ ಎನಿಸಿದ ಸ್ಕ್ರಿಪ್ಟ್ ಬಂದರೆ ಖಂಡಿತಾ ಪಾತ್ರ ಮಾಡುತ್ತೇನೆ. ನಟಿಸದೇ ಇದ್ದರೂ ಸಿನಿಮಾದ ಬೇರೆ ಕೆಲಸಗಳಲ್ಲಾದರೂ ಬ್ಯುಸಿಯಾಗಿರುತ್ತೇನೆ ಎಂದು ರಾಧಿಕಾ ಭರವಸೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೈಲ್ವಾನ್ ಗೆ ಜತೆಯಾದ ಲಹರಿ ವೇಣು, ಮುಂದಿನ ವಾರದಿಂದ ಪೈಲ್ವಾನ್ ಹಾಡುಗಳ ಹವಾ ಶುರು