Publish Date: Sat, 29 Jun 2019 (09:21 IST)
Updated Date: Sat, 29 Jun 2019 (09:24 IST)
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಸಿನಿಮಾ ನಿನ್ನೆ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಚಿತ್ರತಂಡ ಪ್ರಚಾರದ ಬಗ್ಗೆ ಗಮನಹರಿಸಿಲ್ಲ ಎಂಬ ಕೂಗಿಗೆ ಸ್ವತಃ ಶಿವಣ್ಣ ಫುಲ್ ಸ್ಟಾಪ್ ನೀಡಲಿದ್ದಾರೆ.
ಚಿಕಿತ್ಸೆಗಾಗಿ ಲಂಡನ್ ಗೆ ತೆರಳುವ ಮೊದಲು ರುಸ್ತುಂ ಸಿನಿಮಾವನ್ನು ಥಿಯೇಟರ್ ನಲ್ಲಿ ಅಭಿಮಾನಿಗಳ ಜತೆ ಕೂತು ಖುದ್ದಾಗಿ ವೀಕ್ಷಿಸಿ ಪ್ರಚಾರ ಮಾಡಲಿದ್ದಾರೆ.
ಇಂದು ಮತ್ತು ನಾಳೆ ಮೈಸೂರಿನ ಶಾಂತಲಾ, ಸಿದ್ಧಾರ್ಥ ಚಿತ್ರಮಂದಿರದಲ್ಲಿ ಶಿವಣ್ಣ ಚಿತ್ರ ವೀಕ್ಷಿಸಲಿದ್ದಾರೆ. ಈ ಮೊದಲೂ ಕೂಡಾ ಶಿವಣ್ಣ ತಮ್ಮ ಚಿತ್ರಗಳನ್ನು ಈ ರೀತಿ ಅಭಿಮಾನಿಗಳೊಂದಿಗೆ ನೋಡಿ ಚಿತ್ರ ಪ್ರಚಾರ ಮಾಡಿದ್ದರು.