Select Your Language

Notifications

webdunia
webdunia
webdunia
webdunia

ಪೈಲ್ವಾನ್ ಗೆ ಜತೆಯಾದ ಲಹರಿ ವೇಣು, ಮುಂದಿನ ವಾರದಿಂದ ಪೈಲ್ವಾನ್ ಹಾಡುಗಳ ಹವಾ ಶುರು

ಪೈಲ್ವಾನ್ ಗೆ ಜತೆಯಾದ ಲಹರಿ ವೇಣು, ಮುಂದಿನ ವಾರದಿಂದ ಪೈಲ್ವಾನ್ ಹಾಡುಗಳ ಹವಾ ಶುರು
ಬೆಂಗಳೂರು , ಶನಿವಾರ, 29 ಜೂನ್ 2019 (09:31 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಟೀಸರ್, ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹವಾ ಸೃಷ್ಟಿಸಿದೆ. ಇದೀಗ ಪೈಲ್ವಾನ್ ಹಾಡುಗಳ ಸಮಯ.


ಪೈಲ್ವಾನ್ ಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಮುಂದಿನ ವಾರದಿಂದ ಪೈಲ್ವಾನ್ ಹಾಡುಗಳು ಒಂದಾದ ಮೇಲೊಂದರಂತೆ ಬಿಡುಗಡೆಯಾಗಲಿದೆ.

ವಿ‍ಶೇಷವೆಂದರೆ ಪೈಲ್ವಾನ್ ಹಾಡುಗಳ ಹಕ್ಕು ಲಹರಿ ಮ್ಯೂಸಿಕ್ ಪಾಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಲಹರಿ ವೇಣು ಜತೆಗೆ ಕೆಲಸ ಮಾಡುತ್ತಿರುವುದಾಗಿ ಕಿಚ್ಚ ಸುದೀಪ್ ಖುಷಿ ಹಂಚಿಕೊಂಡಿದ್ದಾರೆ. ಅಂದ ಹಾಗೆ ಪೈಲ್ವಾನ್ ರಿಲೀಸ್ ಯಾವಾಗ ಎನ್ನುವುದನ್ನು ಚಿತ್ರತಂಡ ಸದ್ಯದಲ್ಲೇ ಪ್ರಕಟಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳೊಂದಿಗೆ ಕುಳಿತು ರುಸ್ತುಂ ನೋಡಲಿರುವ ಶಿವರಾಜ್ ಕುಮಾರ್