ಮನೆಗೆ ಬಂದಿದ್ದ ಅಭಿಮಾನಿಗಳಿಗಾಗಿ ಹುಡುಕಾಡುತ್ತಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್!

ಶುಕ್ರವಾರ, 3 ಜುಲೈ 2020 (09:34 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ತಮ್ಮ ಮನೆ ಬಳಿ ಬಂದು ತಮ್ಮನ್ನು ಭೇಟಿ ಮಾಡಿ ಹೋದ ಅಭಿಮಾನಿ ದೇವರುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಮ್ಮ ಮನೆಯ ಬಳಿ ಆಟೋ ತೆಗೆದುಕೊಂಡು ಬಂದು ಮೇಡಂ ನಾವು ನಿಮ್ಮ ದೊಡ್ಡ ಅಭಿಮಾನಿಗಳು. ದಯವಿಟ್ಟು ನಮ್ಮ ಆಟೋ ಮೇಲೆ ಅಟೋಗ್ರಾಫ್ ಕೊಡಿ ಎಂದು ಕೇಳಿ ಸಹಿ ಹಾಕಿಸಿಕೊಂಡು ಹೋಗಿರುವ ಅಭಿಮಾನಿಗಳಿಗಾಗಿ ರಚಿತಾ ಹುಡುಕಾಟ ನಡೆಸಿದ್ದಾರೆ.

ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಅದೇ ಅಭಿಮಾನಿಗಳ ಆಟೋ ಜತೆಗೆ ನಿಂತಿರುವ ಫೋಟೋ ಪ್ರಕಟಿಸಿರುವ ರಚಿತಾ ಸುದೀರ್ಘ ಸಂದೇಶ ಬರೆದುಕೊಂಡಿದ್ದಾರೆ. ‘ಬೆಳ್ಳಂ ಬೆಳಿಗ್ಗೆ ಅಮ್ಮ ‘ರಚ್ಚು ಯಾರೋ ಮನೆ ಮುಂದೆ ಕಾಯ್ತಿದ್ದಾರೆ ನೋಡು’ ಅಂದ್ರು. ನಾನು ಹೊರಗೆ ಬಂದು ನೋಡಿದರೆ ನಮ್ಮ ಮನೆ ಮುಂದೆ ಮೂರು ಜನ ಆಟೋ ಜತೆ ನಮ್ಮ ಮನೆ ಕಡೆಗೇ ನೋಡುತ್ತಾ ನಿಂತಿದ್ದರು. ನಾನು ನಿಂತಿದ್ದು ನೋಡಿ ಎಕ್ಸೈಟ್ ಆದ್ರು. ಅವರ ಬಳಿ ಹೋಗ್ತಿದ್ದ ಹಾಗೆ ನನ್ನ ಒಂದು ಮಾತೂ ಆಡಕ್ಕೆ ಬಿಡದೇ ಮೇಡಂ ನಾವ್ ನಿಮ್ ದೊಡ್ಡ ಅಭಿಮಾನಿ. ನನ್ ಆಟೋ ಮೇಲೆ ಫಸ್ಟ್ ಫೋಟೋ ನಿಮ್ದೇ ಇರಬೇಕು ಮೇಡಂ ಎಂದು ಗಿಫ್ಟ್ ವ್ರಾಪರ್ ಓಪನ್ ಮಾಡ್ಸಿ ನನ್ನ ಫೋಟೋ ಅಂಟಿಸಿ ನನ್ನ ಅಟೋಗ್ರಾಫ್ ತೆಗೆದುಕೊಂಡು ಸೆಲ್ಫೀ ಕ್ಲಿಕ್ಕಿಸಿಕೊಂಡು ಹೋದರು.

ಆ ಕ್ಷಣದಲ್ಲಿ ನಾನು ಅವರ ಅಭಿಮಾನ ನೋಡಿ ಭಾವುಕಳಾಗಿದ್ದೆ. ನನಗೆ ಅವರ ಹೆಸರು ಕೇಳಲೂ ಆಗಲಿಲ್ಲ.  ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು. ಆ ಭಾವುಕ ಕ್ಷಣದಲ್ಲಿ ಅವರ ವಿವರ ತಿಳಿಯಲೂ ಆಗಲಿಲ್ಲ. ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನು ನಿಮ್ಮ ಇನ್ ಸ್ಟಾ ಖಾತೆಯಲ್ಲಿ ರಿಪೋಸ್ಟ್ ಮಾಡಿ ನನ್ನ ಖಾತೆ ಟ್ಯಾಗ್ ಮಾಡಿ. ನಾನು ಆ ಅಭಿಮಾನಿಗಳು ಯಾರೆಂದು ತಿಳಿದುಕೊಳ್ಳಬೇಕು’ ಎಂದು ರಚಿತಾ ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್