Select Your Language

Notifications

webdunia
webdunia
webdunia
webdunia

ವೇತನವಿಲ್ಲದೇ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರ ಪರ ಧ್ವನಿಯೆತ್ತಿ ನಟ ಜೆಕೆ

ವೇತನವಿಲ್ಲದೇ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರ ಪರ ಧ್ವನಿಯೆತ್ತಿ ನಟ ಜೆಕೆ
ಬೆಂಗಳೂರು , ಶುಕ್ರವಾರ, 3 ಜುಲೈ 2020 (09:13 IST)
ಬೆಂಗಳೂರು: ಹಲವಾರು ತಿಂಗಳಿನಿಂದ ವೇತನವೂ ಇಲ್ಲದೇ ಕೊರೋನಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ವೈದ್ಯರ ಪರವಾಗಿ ನಟ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಧ್ವನಿಯೆತ್ತಿದ್ದಾರೆ.


‘ಇಂತಹ ಸಂಕಟದ ಸಮಯದಲ್ಲೂ ಕಠಿಣ ಪರಿಶ್ರಮ ಪಡುತ್ತಿರುವ ವೈದ್ಯರಿಗೆ ಕಳೆದ 16 ತಿಂಗಳಿನಿಂದ ವೇತನವನ್ನೇ ನೀಡಿಲ್ಲ ಎಂಬ ಸಂಗತಿ ನಿಜಕ್ಕೂ ದುರದೃಷ್ಟಕರ. ಇದರ ಹೊರತಾಗಿಯೂ ಪರಸ್ಪರ ಕೆಸರೆರಚಾಟ ನಡೆಯುತ್ತಿದೆಯೇ ಹೊರತು ಪರಿಹಾರ ಸಿಗುತ್ತಿಲ್ಲ ಎನ್ನುವುದು ವಿಪರ್ಯಾಸ. ಆದರೆ ಕೊರೋನಾ ವಿರುದ್ಧ ಹೋರಾಡುತ್ತಿರುವ ಈ ಯೋಧರಿಗೆ ವೇತನೇ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ’ ಎಂದು ಜೆಕೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊನ್ನೆಯಷ್ಟೇ ಜೆಕೆ ಇದೀಗ ಜನರಿಗೆ ಬೇಕಾಗಿರುವುದು ಪ್ರತಿಮೆ ನಿರ್ಮಾಣವಲ್ಲ. ಆಸ್ಪತ್ರೆ, ವೈದ್ಯಕೀಯ ಸೌಲಭ್ಯಗಳಿಗೆ ಸರ್ಕಾರ ವೆಚ್ಚ ಮಾಡಬೇಕು ಎಂದು ಎಚ್ಚರಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ಶುಭಾಷಯ ಒಕ್ಕಣೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಯೋಗರಾಜ್ ಭಟ್