Publish Date: Fri, 03 Jul 2020 (09:09 IST)
Updated Date: Fri, 03 Jul 2020 (09:12 IST)
ಬೆಂಗಳೂರು: ತಮ್ಮ ಪರಮಾಪ್ತ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ನಿರ್ದೇಶಕ ಯೋಗರಾಜ್ ಭಟ್ ಮಾಡಿದ ಶುಭಾಷಯ ಸಂದೇಶ ಈಗ ವೈರಲ್ ಆಗಿದೆ.
ಇದುವರೆಗೆ ಯೋಗರಾಜ್ ಭಟ್ ಯಾರದ್ದೇ ಹುಟ್ಟುಹಬ್ಬವಿರಲಿ, ಹ್ಯಾಪೀ ಹುಟ್ದಬ್ಬ ಎಂದು ವಿಶ್ ಮಾಡುತ್ತಿದ್ದರು. ಇದೊಂಥರಾ ಕ್ಯಾಚಿಯಾಗಿತ್ತು.
ಆದರೆ ಈ ಬಾರಿ ಗಣೇಶ್ ಗೆ ಹುದ್ದಿಟಹಬ್ಬದ ಶುಶಾಭಯ ಎಂದು ಸಂದೇಶ ಬರೆದಿದ್ದಾರೆ. ಅವರ ಈ ವಿಶಿಷ್ಟ ಬರಹ ಎಲ್ಲರಿಗೂ ಇಷ್ಟವಾಗಿದೆ. ಈ ವಿಶಿಷ್ಟ ಶುಭಾಷಯದ ಬಗ್ಗೆ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಲೈವ್ ಬಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ಇದು ಗಾಳಿಪಟ ಸಿನಿಮಾದಲ್ಲಿ ಬರುವ ಒಂದು ಝಲಕ್. ಗಣೇಶ್ ಯಾಕೆ ಇಂತಹ ಡೈಲಾಗ್ ಹೇಳುತ್ತಾರೆ ಎನ್ನುವುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು ಎಂದು ಭಟ್ಟರು ಹೇಳಿಕೊಂಡಿದ್ದಾರೆ.