Publish Date: Thu, 02 Jul 2020 (17:23 IST)
Updated Date: Thu, 02 Jul 2020 (17:24 IST)
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ರಾಜಗೋಪಾಲ್ ಇನ್ನಿಲ್ಲವಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜಗೋಪಾಲ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ ಅಸ್ತಮಾ ಇತ್ಯಾದಿ ವಯೋಸಹಜ ಖಾಯಿಲೆಯಿತ್ತು ಎನ್ನಲಾಗಿದೆ.
ಸಿನಿಮಾಗಳಲ್ಲದೆ ಮಿಮಿಕ್ರಿ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದ ರಾಜಗೋಪಾಲ್ ನಿಧನಕ್ಕೆ ಸ್ಯಾಂಡಲ್ ವುಡ್ ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.