Publish Date: Thu, 02 Jul 2020 (09:53 IST)
Updated Date: Thu, 02 Jul 2020 (09:55 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು ಜನ್ಮದಿನದ ಸಂಭ್ರಮ. ಈ ದಿನಕ್ಕೆ ಅವರ ಅಭಿಮಾನಿಗಳಾಗಿ ಎರಡು ಹೊಸ ಸಿನಿಮಾಗಳ ಘೋಷಣೆಯ ಸಿಹಿ ಸುದ್ದಿ ಸಿಕ್ಕಿದೆ.
ನಿನ್ನೆ ಸಂಜೆ ಗಣೇಶ್ ಅಭಿನಯದ ‘ಸಖತ್’ ಸಿನಿಮಾದ ಮೋಷನ್ ಪೋಸ್ಟರ್ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಿತ್ತು. ಇಂದು ಇನ್ನೂ ಹೆಸರಿಡದ ಹೊಸ ಸಿನಿಮಾ ಸೆಟ್ಟೇರಿದೆ. ಹಾಗೂ ಇನ್ನೊಂದು ತ್ರಿಬಲ್ ರೈಡಿಂಗ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಇನ್ನು, ಈ ಬಾರಿ ಕೊರೋನಾದಿಂದಾಗಿ ಗಣೇಶ್ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದರು. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಷಯಗಳ ಸುರಿಮಳೆಗೈಯುತ್ತಿದ್ದಾರೆ.