ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ, ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಸಿನಿಮಾಗೆ ಭರ್ಜರಿ ತಯಾರಿ ನಡೆದಿದೆ.
									
			
			 
 			
 
 			
			                     
							
							
			        							
								
																	 
									
										
								
																	
ಲಾಕ್ ಡೌನ್ ಬಳಿಕ ಚಿತ್ರೀಕರಣಕ್ಕೆ ಅಣಿಯಾಗುತ್ತಿರುವ ಚಿತ್ರತಂಡ, ಚಿತ್ರೀಕರಣಕ್ಕಾಗಿ ಕೃತಕವಾಗಿ ಕಾಡಿನ ಸೆಟ್ ನಿರ್ಮಾಣ ಮಾಡಲಿದೆ. ಇದಕ್ಕಾಗಿ ಸುಮಾರು 50 ಲಕ್ಷ ರೂ.ಗಳಲ್ಲಿ  ಹೈದರಾಬಾದ್ ನ ಸ್ಟುಡಿಯೋದಲ್ಲಿ ಕಾಡಿನ ಸೆಟ್ ನಿರ್ಮಾಣ ಮಾಡಲಾಗುತ್ತಿದೆಯಂತೆ.
									
										
								
																	ಅಂದ ಹಾಗೆ ಈ ಸಿನಿಮಾಗೆ ಅಜನೀಶ್ ಬಿ ಸಂಗೀತ ಸಂಯೋಜಿಸುತ್ತಿದ್ದು, ಅದ್ಭುತ ಹಾಡುಗಳನ್ನು ನೀಡಲಿದ್ದೇವೆ ಎಂದು ಅನೂಪ್ ಘೋಷಿಸಿದ್ದಾರೆ.