ಗೋಲ್ಡನ್ ಸ್ಟಾರ್ ಗಣೇಶ್ ಗೆ ಬರ್ತ್ ಡೇ ವಿಶ್ ಮಾಡಿ ಎಡವಟ್ಟು ಮಾಡಿಕೊಂಡ ಕಿಚ್ಚ ಸುದೀಪ್

ಬುಧವಾರ, 1 ಜುಲೈ 2020 (09:02 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ಎರಡು ದಿನ ಮೊದಲೇ ವಿಶ್ ಮಾಡಿ ಕಿಚ್ಚ ಸುದೀಪ್ ಟ್ರೋಲ್ ಗೊಳಗಾಗಿದ್ದಾರೆ. ತಮ್ಮ ತಪ್ಪು ಅರಿವಾಗುತ್ತಿದ್ದಂತೇ ಮತ್ತೊಂದು ಟ್ವೀಟ್ ಮಾಡಿ ತಿದ್ದಿಕೊಂಡಿದ್ದಾರೆ.


ಗಣೇಶ್ ಬರ್ತ್ ಡೇ ಇರುವುದು ನಾಳೆ ಅಂದರೆ ಜುಲೈ 2 ಕ್ಕೆ. ಆದರೆ ಕಿಚ್ಚ ನಿನ್ನೆಯೇ ಬರ್ತ್ ಡೇಗೆ ವಿಶ್ ಮಾಡಿದ್ದರು. ಆದರೆ ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಂತೇ ಎಚ್ಚೆತ್ತುಕೊಂಡ ಕಿಚ್ಚ ಮತ್ತೊಂದು ಟ್ವೀಟ್ ಮಾಡಿ ತಮ್ಮಿಂದ ತಪ್ಪಾಗಿದೆ ಎಂದು ತಿದ್ದಿಕೊಂಡಿದ್ದಾರೆ.

ಇದನ್ನು ಅಡ್ವಾನ್ಸ್ ವಿಶ್ ಎಂದುಕೋ ಗೆಳೆಯ. ನಾನು ಇಂದು ನಿನ್ನ ಜನ್ಮದಿನವೆಂದು ತಪ್ಪಾಗಿ ತಿಳಿದುಕೊಂಡು ವಿಶ್ ಮಾಡಿದೆ. ನೀನು ಸರಳವಾಗಿ ಬರ್ತ್ ಡೇ ಆಚರಿಸಿಕೊಳ್ಳಲು ನಿರ್ಧರಿಸಿರುವುದಕ್ಕೆ ಅಭಿನಂದನೆಗಳು ಎಂದು ಸುದೀಪ್ ಮತ್ತೊಂದು ಟ್ವೀಟ್ ಮೂಲಕ ತಿದ್ದಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಂಬಿ-ವಿಷ್ಣು ಸ್ನೇಹಕ್ಕೆ ಮಸಿ ಬಳಿಯಬೇಡಿ: ಸುಮಲತಾ ಮನವಿ