ನವದೆಹಲಿ: ಖ್ಯಾತ ಬಹುಭಾಷಾ ನಟ ಆರ್.ಮಾಧವನ್ ಪುತ್ರ ವೇದಾಂತ್ ಮಾಧವನ್ ಡ್ಯಾನಿಶ್ ಓಪನ್ 2022 ರ ಈಜು ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದಾರೆ.
1500 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ವೇದಾಂತ್ ಬೆಳ್ಳಿ ಪದಕ ವಿಜೇತರಾಗಿದ್ದಾರೆ.ಈ ಸಂತೋಷದ ವಿಚಾರವನ್ನು ಸ್ವತಃ ಮಾಧವನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿ ತಾರೆಯರು, ಅಭಿಮಾನಿಗಳು ವೇದಾಂತ್ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪುತ್ರ ವೇದಾಂತ್ ಸ್ವಿಮ್ಮಿಂಗ್ ಕೆರಿಯರ್ ಗಾಗಿಯೇ ಮಾಧವನ್ ದುಬೈನಲ್ಲಿ ವಾಸ್ತವ್ಯ ಹೂಡಿದ್ದರು. ಮಗನ ಸಾಧನೆ ಅವರಲ್ಲೀಗ ಹೆಮ್ಮೆ ತಂದಿದೆ.