Select Your Language

Notifications

webdunia
webdunia
webdunia
webdunia

ಸಲಾರ್ ಜೊತೆ ಬಾಕ್ಸ್ ಆಫೀಸ್ ಪೈಪೋಟಿಗಿಳಿಯಲಿದೆ ಅಲ್ಲು ಅರ್ಜುನ್ ಪುಷ್ಪ 2

ಸಲಾರ್ ಜೊತೆ ಬಾಕ್ಸ್ ಆಫೀಸ್ ಪೈಪೋಟಿಗಿಳಿಯಲಿದೆ ಅಲ್ಲು ಅರ್ಜುನ್ ಪುಷ್ಪ 2
ಹೈದರಾಬಾದ್ , ಬುಧವಾರ, 1 ಜೂನ್ 2022 (08:30 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾಗೆ ಬಾಕ್ಸ್ ಆಫೀಸ್ ನಲ್ಲಿ ಪೈಪೋಟಿ ಕೊಡಲು ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ 2 ರೆಡಿ ಆಗುತ್ತಿದೆ.

ಕೆಜಿಎಫ್ ಯಶಸ್ಸಿನ ಬಳಿಕ ಪುಷ್ಪ 2 ಚಿತ್ರತಂಡ ಸ್ಕ್ರಿಪ್ಟ್ ನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಚಿತ್ರೀಕರಣ ಮಾಡುತ್ತಿದೆ. ಹೀಗಾಗಿ ರಿಲೀಸ್ ಈಗ ನಿಗದಿಯಾಗಿದ್ದಕ್ಕಿಂತ ಮುಂದೂಡಿಕೆಯಾಗಲಿದೆ.

ಇತ್ತ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಕೂಡಾ ಚಿತ್ರೀಕರಣದ ಆರಂಭಿಕ ಹಂತದಲ್ಲಿದೆಯಷ್ಟೇ. ಈ ಸಿನಿಮಾ ಮುಂದಿನ ವರ್ಷ ತೆರೆ ಕಾಣುವ ಸಾಧ‍್ಯತೆಯಿದೆ. ಹೀಗಾಗಿ ಎರಡೂ ಸಿನಿಮಾಗಳು ಒಟ್ಟೊಟ್ಟಿಗೇ ಗಲ್ಲಾಪೆಟ್ಟಿಗೆಯಲ್ಲಿ ಪೈಪೋಟಿ ನಡೆಸುವ ಸಾಧ್ಯತೆಯಿದೆ ಎಂದೇ ಲೆಕ್ಕಾಚಾರ ಹಾಕಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂ.ಎನ್ ಟಿಆರ್ ನಾಯಕಿ ಬಗ್ಗೆ ದಿನಕ್ಕೊಂದು ರೂಮರ್!