ಹೈದರಾಬಾದ್: ಬಹುನಿರೀಕ್ಷಿತ ಪುಷ್ಪ 2 ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದು ಮೊದಲ ದಿನವೇ ದಾಖಲೆಯ ಪ್ರದರ್ಶನ ಕಾಣುತ್ತಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಸಿನಿಮಾ ಬಗ್ಗೆ ಏನಂತಾರೆ ಇಲ್ಲಿದೆ ವಿವರ.
ಪುಷ್ಪ 1 ರಲ್ಲಿ ಅಲ್ಲು ಅರ್ಜುನ್ ಒಬ್ಬ ರಕ್ತಚಂದನ ಕಳ್ಳಸಾಗಣೆ ಮಾಡುವ ಸಾಮಾನ್ಯ ವ್ಯಕ್ತಿಯಾಗಿದ್ದರು. ಆದರೆ ಇಲ್ಲಿ ಅಲ್ಲು ಅರ್ಜುನ್ ಪ್ರಭಾವೀ ವ್ಯಕ್ತಿಯಾಗಿರುತ್ತಾನೆ. ಎಷ್ಟೆಂದರೆ ಆಳುವವರನ್ನೇ ಬದಲಾಯಿಸುವಷ್ಟು ಪ್ರಭಾವಿಯಾಗಿ ಬೆಳೆದಿರುತ್ತಾನೆ. ಓಮ್ನಿ ಕಾರಿನಲ್ಲಿ ಓಡಾಡುತ್ತಿದ್ದ ಪುಷ್ಪ ಇಲ್ಲಿ ಹೆಲಿಕಾಪ್ಟರ್ ನಲ್ಲಿ ಓಡಾಡುವಷ್ಟು ಶ್ರೀಮಂತನಾಗಿರುತ್ತಾನೆ.
ಅದಕ್ಕೆ ತಕ್ಕಂತೆ ಆತನಿಗೆ ಇಲ್ಲಿ ಶತ್ರುಗಳ ಸಂಖ್ಯೆಯೂ ದೊಡ್ಡದಾಗಿರುತ್ತದೆ. ಆದರೆ ಪುಷ್ಪ1 ರಲ್ಲಿ ಕೇವಲ ರೊಮ್ಯಾನ್ಸ್ ಗಷ್ಟೇ ಸೀಮಿತವಾಗಿದ್ದ ರಶ್ಮಿಕಾ ಮಂದಣ್ಣಗೆ ಪುಷ್ಪ 2 ರಲ್ಲಿ ಕೊಂಚ ಪ್ರಾಮುಖ್ಯತೆಯಿದೆ. ಪುಷ್ಪ ಆಕೆಯ ಮಾತನ್ನು ತೆಗೆದುಹಾಕುವುದಿಲ್ಲ. ಸಿನಿಮಾದಲ್ಲಿ ಅವರೂ ಸಾಕಷ್ಟು ಕಡೆ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಪ್ಲಸ್ ಪಾಯಿಂಟ್.
ಪುಷ್ಪ 1 ರಂತೆ ಇಲ್ಲೂ ಅಲ್ಲು ಅರ್ಜುನ್ ಹಣದ ಹಿಂದೆ ಬಿದ್ದು, ಕೊನೆಗೆ ಅದು ತನಗೊಂದು ಲೆಕ್ಕವೇ ಅಲ್ಲ ಎಂಬಂತೆ ಇರುತ್ತಾನೆ. ಜೊತೆಗೆ ಮೊದಲ ಭಾಗದಲ್ಲಿದ್ದಂತೆ ಇಲ್ಲೂ ಎಸ್ ಪಿ ಬನ್ವರ್ ಸಿಂಗ್ ಶೇಖಾವತ್ ಜೊತೆಗಿನ ವೈರತ್ವ ಮುಂದುವರಿಯುತ್ತದೆ. ಈ ಫೈಟ್ ನಲ್ಲಿ ಗೆಲ್ಲುವವರು ಯಾರು ಎಂದು ನೋಡಲು ಸಿನಿಮಾ ನೋಡಬೇಕು.
ಒಂದು ಮಾಸ್ ಸಿನಿಮಾಗೆ ಬೇಕಾದ ಎಲ್ಲಾ ಅಂಶಗಳೂ ಪುಷ್ಪ 2 ರಲ್ಲಿದೆ. ಮೊದಲ ಭಾಗಕ್ಕಿಂತ ಇನ್ನಷ್ಟು ಅದ್ಧೂರಿಯಾಗಿಯೇ ತೋರಿಸಲಾಗಿದೆ. ಜೊತೆಗೆ ಪಡ್ಡೆ ಹೈಕಳ ಕಣ್ಣು ಕುಕ್ಕಿಸುವಂತಹ ಡ್ಯಾನ್ಸ್, ಹಾಡುಗಳು, ಭರ್ಜರಿ ಬಿಜಿಎಂ.. ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡುವುದೇ ಖುಷಿ.