ಬೆಂಗಳೂರು: ಕನ್ನಡದ ಸ್ಟಾರ್ ನಟರೊಬ್ಬರಿಗೆ ನಾಲ್ಕನೇ ಸ್ಟೇಜ್ ಕ್ಯಾನ್ಸರ್ ಇದೆ. ಆದರೆ ಇದನ್ನು ಯಾರಿಗೂ ಹೇಳಬಾರದು ಎಂದು ನನ್ನಲ್ಲಿ ಹೇಳಿದ್ದಾರೆ ಎಂದು ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಹೇಳಿದ್ದಾರೆ.
ಪ್ರಥಮ್ ನೇರಾನೇರ ಮಾತುಗಳಿಂದ ಹಲವು ಬಾರಿ ವಿವಾದಕ್ಕೀಡಾಗಿದ್ದು ಇದೆ. ಇದೀಗ ಅವರು ನೀಡಿರುವ ಹೇಳಿಕೆಯಿಂದ ಸ್ಯಾಂಡಲ್ ವುಡ್ ಸಿನಿಮಾ ಪ್ರಿಯರಿಗೆ ತಲೆಗೆ ಹುಳ ಬಿಟ್ಟಂತಾಗಿದೆ. ಕನ್ನಡದ ಪ್ರತಿಷ್ಠಿತ ನಟರೊಬ್ಬರಿಗೆ ಕ್ಯಾನ್ಸರ್ ಇದೆ ಎಂದು ಪ್ರಥಮ್ ಹೇಳಿದ್ದು ಯಾರು ಆ ನಟ ಎಂದು ಹೇಳಲು ನಿರಾಕರಿಸಿದ್ದಾರೆ.
ಕನ್ನಡದ ನಟರೊಬ್ಬರಿಗೆ ನಾಲ್ಕನೇ ಸ್ಟೇಜ್ ಕ್ಯಾನ್ಸರ್ ಇದೆ. ಆದರೆ ನಾನು ಅವರ ಹೆಸರು ಹೇಳಲ್ಲ. ಯಾಕೆಂದರೆ ಅವರು ಈ ವಿಚಾರ ಹೊರಗೆಲ್ಲೂ ಹೇಳಬಾರದು ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಆದರೆ ಯಾಕೋ ನಿನ್ನ ಬಳಿ ಹೇಳಬೇಕು ಎನಿಸಿತು ಎಂದು ನನಗೆ ಹೇಳಿದ್ದರು. ಹೀಗಾಗಿ ಆ ನಟ ಯಾರು ಎಂದು ನಾನು ಬಹಿರಂಗಪಡಿಸಲ್ಲ ಎಂದಿದ್ದಾರೆ.
ಪ್ರಥಮ್ ಮಾತಿಗೆ ಕೆಲವರು ಇದು ಪಬ್ಲಿಸಿಟಿ ಗಿಮಿಕ್ ಇರಬಹುದು ಎಂದು ವ್ಯಂಗ್ಯ ಮಾಡಿದ್ದಾರೆ. ಒಂದು ವೇಳೆ ನಿಜವೇ ಆಗಿದ್ದರೆ ಪ್ರಥಮ್ ಯಾಕೆ ಹೇಳಿಲ್ಲ. ಇದೆಲ್ಲಾ ಪಬ್ಲಿಸಿಟಿಗಾಗಿ ಪ್ರಥಮ್ ಸುಳ್ಳು ವದಂತಿ ಹಬ್ಬುತ್ತಿದ್ದಾರೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.
ಆದರೆ ಮತ್ತೆ ಕೆಲವರು ಇದು ನಿಜವೂ ಇರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಇದು ಯಾವುದೂ ನಿಜವಾಗದೇ ಇರಲಿ, ಆ ಕಲಾವಿದರು ಚೆನ್ನಾಗಿಯೇ ಇರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.