Select Your Language

Notifications

webdunia
webdunia
webdunia
webdunia

ರೆಬೆಲ್‌ಸ್ಟಾರ್‌ ಅಂಬರೀಶ್ ಪುಣ್ಯಸ್ಮರಣೆ: ಮೊಮ್ಮಗನ ಮೂಲಕ ಮರಳಿ ಬಂದಿದ್ದೀರಿ ಎಂದ ಪತ್ನಿ ಸುಮಲತಾ

Rebel star Ambarish

Sampriya

ಬೆಂಗಳೂರು , ಭಾನುವಾರ, 24 ನವೆಂಬರ್ 2024 (11:15 IST)
Photo Courtesy X
ಬೆಂಗಳೂರು: ಇಂದು ರೆಬೆಲ್‌ ಸ್ಟಾರ್‌ ಅಂಬರೀಶ್ ಅವರ ಆರನೇ ವರ್ಷದ ಪುಣ್ಯಸ್ಮರಣೆ. ಮಾಜಿ ಸಂಸದೆ, ಪತ್ನಿ ಸುಮಲತಾ ಅವರು ಅಂಬರೀಶ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

2018ರ ನವೆಂಬರ್‌ 24ರಂದು ಅಂಬರೀಶ್ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದರು. ಅಂಬರೀಶ್ ಅಗಲಿ ಇಂದಿಗೆ ಆರು ವರ್ಷಗಳಾಗಿದ್ದು, ಇಂದಿಗೂ ಸಹ ಅಭಿಮಾನಿಗಳು ಹಾಗೂ ಕುಟುಂಬದವರ ಮನದಲ್ಲಿ ಅಂಬರೀಶ್ ನೆಲೆಸಿದ್ದಾರೆ.  

ಫೇಸ್​ಬುಕ್​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುಮಲತಾ, ನಿಮ್ಮ ಪ್ರೀತಿ, ನಿಮ್ಮ ಇರುವಿಕೆ ಶಾಶ್ವತ. ಸದಾ ಜನರ ಮಧ್ಯೆ ಇದ್ದು ಸ್ಪಂದನೀಯ ವ್ಯಕ್ತಿತ್ವದೊಂದಿಗೆ ನಮ್ಮೊಂದಿಗಿದ್ದ ಡಾ. ಅಂಬರೀಶ್ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ, ಪ್ರೀತಿ, ಭಕ್ತಿಪೂರ್ವಕವಾಗಿ ಸ್ಮರಿಸುತ್ತಿದ್ದೇನೆ. ನಾಡು, ನುಡಿಗೆ ಅವರು ಸಲ್ಲಿಸಿದ ಸೇವೆಗಳು, ಅವರು ಕಲಿಸಿದ ಜೀವನ ಪಾಠಗಳು ಸದಾ ನಮ್ಮನ್ನು ಕಾಯಲಿವೆ, ಅವರಿಗೆ ಜನಮಾನಸದಲ್ಲಿ ದೊರಕುತ್ತಿರುವ ಅಭಿಮಾನ ನಮ್ಮ ಕುಟುಂಬಕ್ಕೆ ನಿರಂತರ ಆಶೀರ್ವಾದ. ಇದಕ್ಕೆ ನಾವೆಲ್ಲಾ ಚಿರಋಣಿ ಎಂದಿದ್ದಾರೆ.

ನೀವು ಪ್ರತಿ ಹೃದಯ ಬಡಿತದಲ್ಲಿ ನೆಲೆಸಿದ್ದೀರಿ, ಎಲ್ಲೆಲ್ಲೂ ಇದ್ದೀರಿ, ಪ್ರತಿ ಹುಟ್ಟಿನಲ್ಲೂ ಇದ್ದೀರಿ. ಈಗ ನೀವು ಮರಳಿ ಬಂದಿದ್ದೀರಿ ಎಂದಿದ್ದಾರೆ. ಸುಮಲತಾ. ಅಂದಹಾಗೆ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಇತ್ತೀಚೆಗಷ್ಟೆ ತಂದೆಯಾಗಿದ್ದು ಅವರಿಗೆ ಮುದ್ದಾದ ಗಂಡು ಮಗು ಜನಿಸಿದೆ. ಅಂಬರೀಶ್ ಅವರೇ ಮತ್ತೆ ಹುಟ್ಟಿಬಂದಿದ್ದಾರೆ ಎಂಬ ನಂಬಿಕೆಯಲ್ಲಿ ಅವರ ಕುಟುಂಬ ಇದೆ. ಇದೇ ಕಾರಣಕ್ಕೆ ಸುಮಲತಾ ಅವರು ಮರಳಿ ಬಂದಿದ್ದೀರಿ ಎಂದು ಬರೆದುಕೊಂಡಿದ್ದಾರೆ.

ಅಂಬರೀಶ್ ಅವರ ಅಭಿಮಾನಿಗಳು ಅವರ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಮಾಡಿದ್ದಾರೆ. ಅಂಬರೀಶ್ ಅವರು 2018 ರ ನವೆಂಬರ್ 24 ರಂದು ಹೃದಯಾಘಾತದಿಂದ ನಿಧನ ಹೊಂದಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಚೊಚ್ಚಲ ಬಾಲಿವುಡ್ ಸಿನಿಮಾದ ಬಿಗ್‌ ಅಪ್‌ಡೇಟ್‌ ನೀಡಿದ ಮಹಾನಟಿ ಕೀರ್ತಿ ಸುರೇಶ್